ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಬೇಟೆಯನ್ನು ಮುಂದುವರಿಸಿದ ಭಾರತ ► ಮನು ಭಾಕರ್, ಪೂನಂ ಯಾದವ್ ರಿಗೆ ಚಿನ್ನ

(ನ್ಯೂಸ್ ಕಡಬ) newskadaba.com ಆಸ್ಟ್ರೇಲಿಯಾ, ಎ.08. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ನಾಲ್ಕನೇ ದಿನವಾದ ಇಂದು ಕೂಡಾ ಭಾರತವು ಮತ್ತೆರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಆರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಭಾರತದ ಪೂನಂ ಯಾದವ್ ಮತ್ತು ಮನು ಭಾಕರ್ ದೇಶಕ್ಕೆ ಚಿನ್ನ ಗೆದ್ದುಕೊಟ್ಟಿದ್ದು, ಭಾರತದ ಶೂಟರ್ ಹೀನಾ ಸಿಧು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾರತದ ಶೂಟರ್ ರವಿಕುಮಾರ್ ಅವರು ಕಂಚು ಗೆದ್ದುಕೊಂಡಿದ್ದಾರೆ. 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ರವಿಕುಮಾರ್ ಅವರು ಕಂಚು ಪಡೆದರು. ಮಹಿಳೆಯರ 10 ಮೀಟರ್ ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಚಿನ್ನ ಹಾಗೂ ಹೀನಾ ಸಿಧು ಬೆಳ್ಳಿಗೆ ಕೊರಳೊಡ್ಡಿದರು.

Also Read  ಚೆಸ್ ಪಂದ್ಯಾಟ ► ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು

error: Content is protected !!
Scroll to Top