ಸುರಕ್ಷಾ ದಂತ ಚಿಕಿತ್ಸಾಲಯದ 29ನೇ ಸಂಸ್ಥಾಪನಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ಸುರಕ್ಷಾ ದಂತ ಚಿಕಿತ್ಸಾಲಯದ 29ನೇ ಸಂಸ್ಥಾಪನಾ ದಿನವನ್ನು ಗುರುವಾರದಂದು ಆಚರಿಸಲಾಯಿತು.

ಖ್ಯಾತ ವೇದ ವಿದ್ವಾಂಸರಾದ ಶ್ರೀ ಶಿವಪ್ರಸಾದ ಭಟ್ ಚೂಂತಾರು ಅವರು ದೀಪ ಬೆಳಗಿಸಿ ವೇದ ಘೋಷದೊಂದಿಗೆ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ಸಿಹಿ ತಿಂಡಿ ಹಂಚಿ ಟೂತ್ ಪೇಸ್ಟ್ ನೀಡಿ ಸಂಭ್ರಮಿಸಲಾಯಿತು.

ಸುರಕ್ಷಾ  ದಂತ ಚಿಕಿತ್ಸಾಲಯದ ವೈದ್ಯರಾದ ಡಾ ಮುರಲೀ ಮೋಹನ್ ಚೂಂತಾರು, ಡಾ ರಾಜಶ್ರೀ ಮೋಹನ್, ಡಾ ಪ್ರಜ್ವಲ್ ಶೆಟ್ಟಿ ಹಾಗೂ ದಂತ ಸಹಾಯಕಿಯರಾದ ರಮ್ಯಾ, ಚೈತ್ರ, ಸುಷ್ಮಿತಾ ಹಾಗೂ ಜಯಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಳೆದ 28 ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯ ಮಂಜೇಶ್ವರದ ಗ್ರಾಮೀಣ ಪರಿಸರದ ಜನತೆಗೆ ವಿಶ್ವ ದರ್ಜೆಯ ದಂತ ಚಿಕಿತ್ಸೆಯನ್ನು ನೀಡಿ ಜನಮನ್ನಣೆ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. .

Scroll to Top