ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ವಿಟ್ಲದಲ್ಲಿ ತಂಬಾಕು ವಿರೋಧಿ ದಿನಾಚರಣೆ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 27. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಕಲ್ಪವೃಕ್ಷ ಜ್ಞಾನ ವಿಕಾಸಕೇಂದ್ರದಲ್ಲಿ ತಂಬಾಕು ವಿರೋಧಿ ದಿನಾಚರಣೆ ಹಾಗೂ ಯೂಟ್ಯೂಬ್ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಕಾರಂತರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಮುದಾಯ ಅರೋಗ್ಯ ಇಲಾಖೆಯ ರಂಜಿತಾ ಭಾಗವಹಿಸಿದ್ದರು. ಈ ಸಂದರ್ಭ ಅಳಿಕೆ ವಲಯಾಧ್ಯಕ್ಷರು ರಾಜೇಂದ್ರ ರೈ, ಮುಳಿಯ ಒಕ್ಕೂಟ ಅಧ್ಯಕ್ಷರರಾದ ಉದಯ, ಕೇಂದ್ರದ ಅಧ್ಯಕ್ಷರಾದ ಶಾಲಿನಿ ಶೆಟ್ಟಿ, ಸೇವಾಪ್ರತಿನಿಧಿ ಕಾವ್ಯ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

 

ಸಮುದಾಯ ಅರೋಗ್ಯ ಇಲಾಖೆಯ ರಂಜಿತಾರವರು ಕೇಂದ್ರದ ಸದಸ್ಯರಿಗೆ ಉಚಿತ ಶುಗರ್ ಹಾಗೂ ಬಿಪಿ ಪರೀಕ್ಷೆ ಮಾಡಿದರು. ವಲಯ ಮೇಲ್ವಿಚಾರಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ ಸ್ವಾಗತಿಸಿ, ಮುಳಿಯ ಸೇವಾಪ್ರತಿನಿಧಿ ವಿನಯ ಧನ್ಯವಾದಗೈದರು.

Scroll to Top