(ನ್ಯೂಸ್ ಕಡಬ) newskadaba.com ಜೂ. 26. ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದಡಿಯಲ್ಲಿ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ ತಿಳಿಸಿದೆ.
ವರದಿಯ ಪ್ರಕಾರ, ಈ ಮೂವರು ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ಇರಾನ್ಗೆ ತರಲು ಯತ್ನಿಸುವ ಮೂಲಕ ಇಸ್ರೇಲ್ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರಿಗೆ ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಬುಧವಾರ ಮರಣದಂಡನೆ ವಿಧಿಸಲಾಗಿದೆ.
ಶಿಕ್ಷೆಗೆ ಗುರಿಯಾದ ಮೂವರು ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್ನ ಕೋರ್ಟ್ ಹಂಚಿಕೊಂಡಿದೆ. ಇನ್ನೂ ಸಂಘರ್ಷದ ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.














