ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟದ ಶ್ರೀದೇವಿ ಸಂಘಕ್ಕೆ ಲಾಭಾಂಶ ವಿತರಣೆ



(ನ್ಯೂಸ್ ಕಡಬ) newskadaba.com ಕಡಬ, ಜೂ. 25. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟದ ಶ್ರೀದೇವಿ ಸ್ವ-ಸಹಾಯ ಸಂಘಕ್ಕೆ ಲಾಭಾಂಶ ವಿತರಣೆ ಕಾರ್ಯಕ್ರಮವು ನಡೆಯಿತು.







ಸಂಘದ ಸದಸ್ಶರಿಗೆ ಒಟ್ಟು 23,118 ರೂಪಾಯಿ ಮೊತ್ತದ ಲಾಭಾಂಶವು ಸದಸ್ಯರ ಉಳಿತಾಯ ಹಾಗೂ ಗುಣಮಟ್ಟದ ಬ್ಶಾಂಕ್ ವ್ಶವಹಾರಕ್ಕೆ ನೀಡಲಾಗಿದ್ದು, ಲಾಭಾಂಶದ ಲೆಕ್ಕಪರಿಶೋಧನಾ ಪತ್ರವನ್ನು ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ವಿತರಿಸಿ ಸಂಘದ ಗುಣಮಟ್ಟದ ವ್ಶವಹಾರದ ಬಗ್ಗೆ ಮಾಹಿತಿ ನೀಡಿದರು.






ಈ ಸಂದರ್ಭದಲ್ಲಿ ಕೊಣಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಬೇಬಿ ಹಾಗೂ ಶ್ರೀದೇವಿ ಸಂಘದ ಸದಸ್ಯರುಗಳಾದ ಶ್ರೀಮತಿ ಮರಿಯಮ್ಮ ಪಿ.ಜೆ, ಶ್ರೀಮತಿ ನಿರ್ಮಲಾ ಎಮ್, ಶ್ರೀಮತಿ ಗೀತಾ, ಶ್ರೀಮತಿ ಲೋಕೇಶ್ವರಿ ಹಾಗೂ ಶ್ರೀಮತಿ ನೀಲಮ್ಮ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top