(ನ್ಯೂಸ್ ಕಡಬ) newskadaba.com ಕಡಬ, ಜೂ. 23. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಜೂನ್ ತಿಂಗಳ ಮಾಸಿಕ ಸಭೆಯು ಮರ್ದಾಳ ವಲಯ ಕಛೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಮೂಲಕ ಪ್ರತೀ ವಲಯದಲ್ಲಿ ಒಂದು ವಿಪತ್ತು ನಿರ್ವಹಣಾ ಘಟಕವನ್ನು ಸೂಕ್ತ ತರಬೇತಿಯೋಂದಿಗೆ ನಿಯೋಜಿಸಿರುವ ಉದ್ದೇಶ ಪ್ರಾಕೃತಿಕ ವಿಕೋಪದಿಂದ ಅನಾಹುತಗಳು ಸಂಭವಿಸಿದಾಗ, ರಸ್ತೆ ಅಪಘಾತಗಳು ಸಂಭವಿಸಿದಾಗ ಹಾಗೂ ಅನಾರೋಗ್ಶದಿಂದ ಬಳಲುತ್ತಿರುವ ವ್ಶಕ್ತಿಯ ಆತ್ಮಸ್ಥೈರ್ಯ ಹೆಚ್ಚಿಸಲು ಸ್ಥಳೀಯವಾಗಿಯೇ ಸೂಕ್ತ ವ್ಶಕ್ತಿಗಳ ನೆರವು ದೊರೆತರೆ ಸಮಾಜದಲ್ಲಿ ಉತ್ತಮ ವಾತಾವರಣವನ್ನು ಮೂಡಿಸಲು ಸಾಧ್ಶವಾಗುತ್ತದೆ. ಮಳೆಗಾಲ ಪ್ರಾರಂಭವಾಗುವ ಈ ಸಂದರ್ಭದಲ್ಲಿ ನೀರಿನ ಪ್ರವಾಹ ˌ ವಿಪರೀತ ಗಾಳಿ ಮಳೆಯಿಂದ ಮನೆಗಳಿಗೆ ಮರಗಳಿಂದ ಆಗುವ ಅನಾಹುತ, ರಸ್ತೆಗಳಿಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗುವ ಸಂದರ್ಭ ನಮ್ಮ ಶೌರ್ಯ ವಿಪತ್ತು ಘಟಕದ ಎಲ್ಲಾ ಸ್ವಯಂ ಸೇವಕರುಗಳು ಸೇವಾ ಮನೊಭಾವನೆಯಿಂದ ನೆರವು ನೀಡಲು ಸಿದ್ದರಿರಬೇಕು. ತಮ್ಮ ಸಾಮಾಜಿಕ ಕಳಕಳಿಯ ಕೆಲಸವು ಸಮಾಜಕ್ಕೆ ಸ್ಪೂರ್ತಿಯಾಗಬೇಕು ಎಂದರು.
ಸಭೆಯ ಅಧ್ಶಕ್ಷತೆಯನ್ನು ಘಟಕ ಪ್ರತಿನಿಧಿ ಭವಾನಿಶಂಕರ ವಹಿಸಿದ್ದರು. ಘಟಕ ಸಂಯೋಜಕಿ ಜ್ಞಾನ ಸೆಲ್ವೀ ಹಾಗೂ ಘಟಕದ ಸ್ವಯಂ ಸೇವಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









