(ನ್ಯೂಸ್ ಕಡಬ) newskadaba.com ಜೂ. 20. ಇಸ್ರೇಲ್ ನ ಮೈಕ್ರೋಸಾಫ್ಟ್ ಕಚೇರಿಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಮೈಕ್ರೋಸಾಫ್ಟ್ ತಂತ್ರಜ್ಞಾನ ಉದ್ಯಾನವನ ಹಾನಿಯಾಗಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ದಕ್ಷಿಣ ಇಸ್ರೇಲ್‌ನ ಬಿಯರ್ ಶೆವಾ ನಗರದಿಂದ ವರದಿಯಾಗಿದೆ.
ಇರಾನ್ ನ ಕ್ಷಿಪಣಿಯನ್ನು ಇಸ್ರೇಲ್ ತಡೆಗಟ್ಟಿದ ನಂತರ ಅಗ್ನಿಶಾಮಕ ಸಿಬ್ಬಂದಿ ಮೈಕ್ರೋಸಾಫ್ಟ್ ತಂತ್ರಜ್ಞಾನ ಉದ್ಯಾನವನ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ರೇಲ್ ಪೊಲೀಸರು ಸ್ಫೋಟಕ ಸಾಮಗ್ರಿಗಳು ಆಸ್ತಿಗೆ ಹಾನಿ ಮಾಡಿವೆ ಎಂದು ತಿಳಿಸಿದ್ದಾರೆ. ಆದರೆ ಪ್ರಾಣಹಾನಿ ವರದಿಯಾಗಿಲ್ಲ.













