ಶುದ್ಧ ಕುಡಿಯುವ ನೀರು ಪೂರೈಕೆ ಗ್ರಾಮ ಪಂಚಾಯತ್ಗಳ ಆದ್ಯತೆಯಾಗಲಿ: ಜಿಲ್ಲಾ ಪಂಚಾಯತ್ ಸಿಇಓ



(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 18. ಜಲಜೀವನ್ ಮಿಷನ್ ಯೋಜನೆ ಮತ್ತು ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದ ಅನುಷ್ಠಾನ ಮತ್ತು  24/7 ನೀರು ಸರಬರಾಜು, ಮಾದರಿ ಗ್ರಾಮಗಳ ಘೋಷಣೆ ಕುರಿತಂತೆ ತರಬೇತಿ ಕಾರ್ಯಗಾರ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ  ಡಾ. ಆನಂದ್ ಕೆ  ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ   ಕುಡಿಯುವ ನೀರಿನ ಸರಬರಾಜು ಮಾಡುವುದರಲ್ಲಿ ಗ್ರಾಮ ಪಂಚಾಯತ್ ಪ್ರಮುಖ ವಹಿಸುತ್ತದೆ. ಸಾರ್ವಜನಿಕರಿಗೆ  ಕುಡಿಯುವ ನೀರಿನ ಸರಬರಾಜು ಆಗುವ ನೀರಿನ ಮೂಲಗಳಾದ ಓವರ್ ಹೆಡ್ ಟ್ಯಾಂಕ್, ಜಿ.ಎಲ್.ಎಸ್.ಆರ್, ಬೋರ್ವೆಲ್ ಹಾಗೂ ಪಂಪ್ ಹೌಸ್ ಸುತ್ತಮುತ್ತ ಸ್ವಚ್ಛವಾಗಿರುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಹೇಳಿದರು.







ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಒದಗಿಸಬೇಕು. ಓವರ್ ಹೆಡ್ ಟ್ಯಾಂಕ್, ಜಿ.ಎಲ್.ಎಸ್. ಆರ್‍ ಗಳನ್ನು ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವುದನ್ನು ಲಾಗ್ ಪುಸ್ತಕದಲ್ಲಿ ದಾಖಲಿಸಬೇಕು. ಕಾರ್ಯಾಚರಣೆ ಮತ್ತು  ಬಜೆಟ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಿಸಿದ ಗ್ರಾಮವಾರು  ಲೆಕ್ಕಪತ್ರ  ಅಥವಾ ಪುಸ್ತಕಗಳನ್ನು ನಿರ್ವಹಿಸಬೇಕು. ನೀರಿನ ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು. ನೀರಿನ ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಸಮಸ್ಯೆಗಳು, ನೀರಿನ ಗುಣಮಟ್ಟದ ವಿಶ್ಲೇಷಣೆ ಹಾಗೂ ಕಲುಷಿತ ನೀರಿನ ಘಟನೆಗಳನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ಗಳು ನೀರಿನ ಬಳಕೆ ಶುಲ್ಕದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಸಾರ್ವಜನಿಕರು ಬಳಕೆ ಮಾಡಿದ ನೀರಿಗೆ ಮಾತ್ರ ಶುಲ್ಕವನ್ನು ಪಾವತಿಸಬೇಕು. ವಾಟರ್ ಮೀಟರ್ ಮೂಲಕ ನೀರಿನ ಬಳಕೆಯನ್ನು ಕಂಡುಹಿಡಿಯಲು ಅಳವಡಿಸಲಾಗಿದ್ದು, ಸಾರ್ವಜನಿಕರು ಅದನ್ನು ಹಾಳು ಮಾಡಿದರೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದಂಡ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸೌತ್ ಏಷಿಯಾ ವಲ್ಡ್ ಬ್ಯಾಂಕ್ (World bank) ಪ್ರಾಕ್ಟೀಸ್ ಮ್ಯಾನೇಜರ್  ಸುಮಿಲ ಗುಲ್ಯಾನಿ, ಟಾಸ್ಕ್ ಟೀಮ್ ಲೀಡರ್  ಕ್ರಿಸ್ಟೋಫರ್ ವೆಲ್ಸಿಯನ್, ಮರಿಯಪ್ಪ ಕುಲ್ಲಪ್ಪ, ಡೆಪ್ಯುಟಿ ಸೆಕ್ರೆಟರಿ ಜಾಫರ್ ಶರೀಫ್ ಸುತಾರ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಕಾರ್ಯಕಾರಿ ಅಭಿಯಂತರ ಎನ್.ಡಿ ರಘುನಾಥ್, ಉಡುಪಿ ಇಇ ಉದಯಕುಮಾರ್ ಶೆಟ್ಟಿ  ಮತ್ತಿತರರು ಉಪಸ್ಥಿತರಿದ್ದರು.






error: Content is protected !!
Scroll to Top