ಇಂದಿನಿಂದ ಫಿಫಾ ಕ್ಲಬ್ ವಿಶ್ವಕಪ್ ಪಂದ್ಯಾಟ- 32 ತಂಡಗಳು ಭಾಗಿ

(ನ್ಯೂಸ್ ಕಡಬ) newskadaba.com ಜೂ. 14. ಫಿಫಾ ಕ್ಲಬ್​ ವಿಶ್ವಕಪ್ ಹೊಸ ಸ್ವರೂಪದೊಂದಿಗೆ 21ನೇ ಆವೃತ್ತಿಗೆ ಸಜ್ಜಾಗಿದ್ದು, ಇಂದಿನಿಂದ(ಜೂ. 14) ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್‌ ನಲ್ಲಿರುವ ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ಆರಂಗೊಳ್ಳಲಿದೆ. ಪಂದ್ಯಾವಳಿಯ ಉದ್ಘಾಟನಾ ದಿನವಾದ ಇಂದು ಈಜಿಪ್ಟ್‌ ನ ಅಲ್ ಅಹ್ಲಿ ಮತ್ತು ಲಿಯೋನೆಲ್‌ ಮೆಸ್ಸಿ ನಾಯಕತ್ವದ ಇಂಟರ್ ಮಿಯಾಮಿ ತಂಡಗಳು ಸೆಣಸಾಟ ನಡೆಸಲಿದೆ.

ಈ ಆವೃತ್ತಿಯಲ್ಲಿ ಮೊದಲ ಬಾರಿಗೆ 32 ತಂಡಗಳು ಆಡಲಿದ್ದು, ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಹಿಂದೆ ಗರಿಷ್ಠ 7 ತಂಡಗಳಷ್ಟೇ ಆಡುತ್ತಿದ್ದವು. ಅಮೆರಿಕದ 12 ತಾಣಗಳಲ್ಲಿ ಒಟ್ಟು 63 ಪಂದ್ಯಗಳು ನಡೆಯಲಿವೆ. ಈಜಿಪ್ಟ್‌ ನ ಅಲ್ ಅಹ್ಲಿ ಮತ್ತು ಅಮೆರಿಕದ ಇಂಟರ್ ಮಿಯಾಮಿ ಪಂದ್ಯ ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 5.30ಕ್ಕೆ ಪ್ರಸಾರಗೊಳ್ಳಲಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್​ ಹಂತಕ್ಕೇರಲಿವೆ. ಜೂನ್​ 28ರಿಂದ ಜುಲೈ 1ರವರೆಗೆ ಪ್ರಿ ಕ್ವಾರ್ಟರ್​ಫೈನಲ್ಸ್​, ಜುಲೈ 4ಮತ್ತು 5ರಂದು ಕ್ವಾರ್ಟರ್​ಫೈನಲ್ಸ್​, ಜುಲೈ 8 ಮತ್ತು 9ರಂದು ಸೆಮಿಫೈನಲ್ಸ್​ ಮತ್ತು ಜುಲೈ 13ರಂದು ಫೈನಲ್​ ಪಂದ್ಯಾಟ ನಡೆಯಲಿದೆ.

Also Read  ನಾಳೆ ಭಾರತ-ಬಾಂಗ್ಲಾ ಅಂತಿಮ ಟಿ20

ಪ್ರಸಕ್ತ ಟೂರ್ನಿಯ ಒಟ್ಟು ಬಹುಮಾನ ಮೊತ್ತ 8,607 ಕೋಟಿ ರೂ. ಆಗಿದ್ದು, ವಿಜೇತ ತಂಡ 344 ಕೋಟಿ ರೂ. ಬಹುಮಾನ ಮೊತ್ತ ಸಹಿತ ಒಟ್ಟು 1,076 ಕೋಟಿ ರೂ. ಗಳಿಸಲಿದೆ. ಟೂರ್ನಿಯ ಪ್ರತಿ ಜಯಕ್ಕೆ 17.21 ಕೋಟಿ ರೂ. ಮತ್ತು ಪ್ರತಿ ಡ್ರಾಕ್ಕೆ 8.60 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್​ಅಪ್​ಗೆ 258 ಕೋಟಿ ರೂ. ಸಿಗಲಿದೆ.

Also Read  ಮುಖಕ್ಕೆ ಕೇಕ್ ಹಚ್ಚಿದ ಪತಿ- ಮದುವೆ ಕ್ಯಾನ್ಸಲ್ ಮಾಡಿದ ಯುವತಿ

 

error: Content is protected !!
Scroll to Top