ಕೋವಿಡ್ ನಿಂದ ಮತ್ತೆ 5 ಜನ ಮೃತ್ಯು; ಮೃತರ ಸಂಖ್ಯೆ 37ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಜೂ:04, ಹೊಸದಿಲ್ಲಿ: ಕೋವಿಡ್-19 ಸೋಂಕಿನಿಂದ ಮಂಗಳವಾರ ಮತ್ತೆ ಐದು ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಪ್ರಸಕ್ತ ವರ್ಷ ಮೃತರ ಸಂಖ್ಯೆ 37ಕ್ಕೇರಿದೆ.

ಮಹಾರಾಷ್ಟ್ರದಲ್ಲಿ ಇಬ್ಬರು, ಕೇರಳ, ತಮಿಳುನಾಡು ಹಾಗೂ ಬಂಗಾಳದಲ್ಲಿ ತಲಾ ಒಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ಸೋಂಕಿತರ ಸಂಖ್ಯೆ 4026ಕ್ಕೇರಿದ್ದು, ಕೇರಳದಲ್ಲಿ ಗರಿಷ್ಠ ಅಂದರೆ 1416 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ (494), ಗುಜರಾತ್ (397) ಮತ್ತು ದೆಹಲಿ (393) ನಂತರದ ಸ್ಥಾನಗಳಲ್ಲಿವೆ. ದೇಶಾದ್ಯಂತ ಇದುವರೆಗೆ ಪ್ರಸಕ್ತ ವರ್ಷ 37 ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ (10) ಸಂಖ್ಯೆಯ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.
ಕೇರಳ (9), ದೆಹಲಿ (4), ಕರ್ನಾಟಕ (4), ತಮಿಳುನಾಡು (3), ಉತ್ತರ ಪ್ರದೇಶ (2) ನಂತರದ ಸ್ಥಾನಗಳಲ್ಲಿದ್ದು, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಬಂಗಾಳದಲ್ಲಿ ತಲಾ ಒಂದು ಸಾವು ವರದಿಯಾಗಿದೆ.

error: Content is protected !!
Scroll to Top