ಉತ್ತರ ಪ್ರದೇಶ : ಕಟ್ಟಡಕ್ಕೆ ಬೆಂಕಿ ಬಿದ್ದು ದಂಪತಿ ಮತ್ತು ಮೂರು ಮಕ್ಕಳು ಸಾವು

(ನ್ಯೂಸ್ ಕಡಬ) newskadaba.com, ಮೇ.05 ಕಾನ್ಸುರ: ಉತ್ತರ ಪ್ರದೇಶದ ಕಾನ್ಪುರದ ಚಾಮನ್‌ಗಂಜ್ ಪ್ರದೇಶದ ಪ್ರೇಮ್‌ನಗರದ ಐದು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ದಂಪತಿ ಮೂವರು ಮಕ್ಕಳು ಸಾವನ್ನಪ್ಪಿರುವ ಭೀಕರ ಘಟನೆ ಕಳೆದ ರಾತ್ರಿ ನಡೆದಿದೆ.

ಇಡೀ ಕಟ್ಟಡವನ್ನು ಬೃಹತ್ ಬೆಂಕಿ ಆವರಿಸಿದೆ. ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಕುಟುಂಬದ ಎಲ್ಲರೂ ಬೆಂಕಿಗೆ ಸಿಲುಕಿದ್ದಾರೆ ಆದರಲ್ಲಿ ಮೊಹಮ್ಮದ್ ಡ್ಯಾನಿಶ್ (45)ಮತ್ತು ಪತ್ನಿ ನಜೀನ್ ಸಬಾ (42) ಸ್ಥಳದಲೇ ಸಾವನ್ನಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣುಮಕ್ಕಳಾದ ಸಾರಾ (15), ಸಿಮ್ರಾ (12) ಮತ್ತು ಇನಾಯಾ (7) ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top