(ನ್ಯೂಸ್ ಕಡಬ) newskadaba.com ಮಾ. 18 ಬೆಂಗಳೂರು: ಕೋವಿಡ್ ನಂತರ ಈಗ ಮತ್ತೊಂದು ವೈರಸ್‌ವೊಂದು ಪತ್ತೆಯಾಗಿದೆ. ಮಾನವ ಕೊರೊನಾ ವೈರಸ್ ಅಥವಾ ಹ್ಯುಮನ್ ಕೊರೊನಾ ವೈರಸ್ ಅಥವಾ HKU1 ಎಂದು ಕರೆಯಲ್ಪಡುವ ವೈರಸೊಂದು ಕೋಲ್ಕತ್ತಾ ಮೂಲದ ಮಹಿಳೆಯಲ್ಲಿ ಕಾಣಿಸಿಕೊಂಡಿದ್ದು, ಇದು ಕೂಡ ಉಸಿರಾಟಕ್ಕೆ ಸಮಸ್ಯೆ ತಂಡೊಡ್ಡುವ ಕಾಯಿಲೆಯಾಗಿದೆ. ಇದು ತೀವ್ರ ಸ್ವರೂಪ ಪಡೆದಲ್ಲಿ ಶೀತ ಹಾಗೂ ನ್ಯುಮೋನಿಯಾ ಉಂಟು ಮಾಡಬಹುದು. ಆದರೆ ಭಯಪಡುವ ಅಗತ್ಯವಿಲ್ಲ ಆದರು ಬಹಳ ಎಚ್ಚರಿಕೆಯಿಂದ ಇರುವಂತೆ ಎಂದು ತಜ್ಞರು ಸೂಚಿಸಿದ್ದಾರೆ.

ಕೋಲ್ಕತ್ತಾದ ಗರಿಯಾ ನಿವಾಸಿಯಾದ 45 ವರ್ಷದ ಮಹಿಳೆಯೊಬ್ಬರಿಗೆ ಹ್ಯೂಮನ್ ಕೊರೊನಾ ವೈರಸ್ ( HKU1) ಸೋಂಕು ತಗುಲಿದೆ. ಸೋಂಕಿನಿಂದ ಬಳಲುತ್ತಿರುವ ಅವರಿಗೆ ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕಳೆದ 15 ದಿನಗಳಿಂದ ಜ್ವರ, ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರು, ಆದರೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಈ ವೈರಸ್ COVID-19 ನಷ್ಟು ಕುಖ್ಯಾತವಲ್ಲದಿದ್ದರೂ ಇದೂ ಕೂಡ ಉಸಿರಾಟದ ಸೋಂಕನ್ನು ಉಂಟುಮಾಡಬಹುದು ಆದರೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗಿದ್ದರೆ ಈ ಹ್ಯೂಮನ್ ಕೋವಿಡ್ ವೈರಸ್‌ನ ಲಕ್ಷಣಗಳು ಹಾಗೂ ಅಪಾಯಗಳೇನು ಎಂಬ ಬಗ್ಗೆ ತಿಳಿಯೋಣ.