(ನ್ಯೂಸ್ ಕಡಬ) newskadaba.com ಫೆ. 25: ಬೆಂಗಳೂರು: ಉದ್ಯಾನವನದಲ್ಲಿ ವಾಯುವಿಹಾರ ಮಾಡಲು ಮೈದಾನದಲ್ಲಿ ವ್ಯಾಯಾಮ ಮಾಡಲು ಇನ್ನು ಮುಂದೆ ಶುಲ್ಕ ಕಟ್ಟಬೇಕು. ನಿರ್ವಹಣಾ ವೆಚ್ಚ ಹೆಸರಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸರ್ಕಾರಿ ಕ್ರೀಡಾಂಗಣದಲ್ಲಿ ಇನ್ಮುಂದೆ ಯಾವುದೇ ಕ್ರೀಡಾಪಟು ತರಬೇತಿ ಪಡೆ ಯಲು ಶುಲ್ಕ ಕಟ್ಟಬೇಕು. ಇದರಲ್ಲಿ ರಾಜ್ಯ, ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡಾಪಟುಗಳು ಸಹ ಶುಲ್ಕ ಕಟ್ಟಲೇಬೇಕು.


ಇಡೀ ರಾಜ್ಯಾದ್ಯಂತ ಮಾ.1 ರಿಂದ ಜಾರಿಯಾಗಲಿದ್ದು, ವಿಶೇಷವಾಗಿ ಈಗ ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು ಇಲ್ಲಿ ತರಬೇತಿ ಪಡೆಯುವ ಪ್ರತಿಯೊಬ್ಬ ಕ್ರೀಡಾಪಟುಗಳು ಶುಲ್ಕ ಕಟ್ಟಬೇಕು. ಉದ್ಯಾನವನದಲ್ಲಿ ವಾಯುವಿಹಾರ ಮಾಡುವವರು ಮಾಸಿಕ 300 ರೂ. ಕೊಡಬೇಕು.