ಫೆ.1ಕ್ಕೆ ಕೆಎಂಎಫ್‌ ಸ್ಥಗಿತ ; ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ

(ನ್ಯೂಸ್ ಕಡಬ) newskadaba.com ಜ.28: ವೇತನ ತಾರತಮ್ಯ ವಿರೋಧಿಸಿ ಕರ್ನಾಟಕ ಹಲು ಮಹಾಮಂಡಳ (ಕೆಎಂಎಫ್‌) ಅಧಿಕಾರಿಗಳು ಹಾಗು ಸಿಬ್ಬಂದಿ ಫೆ.1ರಿಂದ ಮುಷ್ಕರಕ್ಕೆ ಮುಂದಾಗಿರುವುದರಿಂದ ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಮುಖವಾಗಿ 7ನೇ ವೇತನ ಆಯೋಗದ ವರದಿಯಂತೆ ವೇತನ ಪರಿಸ್ಕರಣೆ, ಸೌಲತ್ತುಗಳನ್ನು ಯಥಾವತ್‌ ಜಾರಿ ಮಾಡುವಂತೆ ಪಟ್ಟು ಹಿಡಿದು ಫೆ.1ರಂದು ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಲು ಕೆಎಂಎಫ್‌ ಹಾಗು ಎಲ್ಲಾ ಒಕ್ಕೂಟಗ ಅಧಿಕಾರಿಗಳು, ಸಿಬ್ಭಂದಿ ಸಂಘ ನಿರ್ಧರಿಸಿದೆ.

ಈ ಬಗ್ಗೆ ಅಧ್ಯಕ್ಷರು,ವ್ಯವಸ್ಥಾಪಕ ನಿದೇರ್ಶಕರಿಗೂ ಮನವಿ ಪತ್ರದಲ್ಲಿ ಹೋರಾಟದ ವಿಷಯ ತಿಳಿಸಲಾಗಿದೆ.ತಾಂತ್ರಿಕ ಅಡೆ-ತಡೆ ನೆಪದಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ, 7ನೇ ವೇತನ ಆಯೋಗದ ವರದಿ ಜಾರಿಯಿಂದ ಹಾಲು ಒಕ್ಕೂಟಗಳಿಗೆ ಹೊರೆಯಾಗಲ್ಲ ಆದರೂ ನಮ ಹಲವಾರಿ ಭಾರಿ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ ಹಾಗಾಗಿ ಅನಿರ್ಧಿಷ್ಟಾವದಿ ಮಷ್ಕರ ಅನಿವಾರ್ಯ ಎಂದು ಸಂಘಟನೆ ಹೇಳಿದೆ. ಮುಷ್ಕರದಿಂದಾಗಿ ರಾಜ್ಯದ ಹೈನು ಉದ್ಯಮಕ್ಕೆ ಭಾರಿ ಪೆಟ್ಟು ಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಇದು ನಿಂತರೆ ಪರಿಸ್ಥಿತಿ ದುಸ್ತರವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Also Read  ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಬಿಜೆಪಿ

ಕೆಎಂಎಫ್‌ ಮತ್ತು ಒಕ್ಕೂಟಗಳು ಕಳೆದ ಹಲವು ವರ್ಷಗಳಿಂದ ಶೇ. 10ರಷ್ಟು ವಹಿವಾಟು ವೃದ್ಧಿಸಿದೆ. ಆದರೆ ಆಡಳಿತ ವೆಚ್ಚವನ್ನು ಶೇ. 2ರೊಳಗೆ ಇರುವಂತೆ ಪ್ರಯತ್ನ ಮಾಡುತ್ತಿದೆ. ಸದ್ಯದ ಬೆಲೆ ಏರಿಕೆಯ ಕಾರಣದಿಂದಾಗಿ ವಾರ್ಷಿಕ ವೆಚ್ಚವನ್ನು ಶೇ. 4 ರಿಂದ 5ಕ್ಕೆ ಹೆಚ್ಚಿಸುವಂತೆ ಕಳುಹಿಸಿದ ಪ್ರಸ್ತಾವನೆಯನ್ನು ಸಹಕಾರ ಇಲಾಖೆ ಸಕಾರಾತಕವಾಗಿ ಸ್ಪಂಧಿಸಿಲ್ಲ ಎಂದು ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

Also Read  ಕೆಎಂಎಫ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರವೇ ನಂದಿನಿ ಇಡ್ಲಿ ದೋಸೆ ಹಿಟ್ಟು ಮಾರುಕಟ್ಟೆಗೆ

error: Content is protected !!
Scroll to Top