(ನ್ಯೂಸ್ ಕಡಬ) newskadaba.com ಜ.20 ವಾಷಿಂಗ್ಟನ್: ಹೈದರಾಬಾದ್ ಮೂಲದ 26 ವರ್ಷದ ವಿದ್ಯಾರ್ಥಿಯನ್ನು ಅಮೆರಿಕದ ವಾಷಿಂಗ್ಟನ್‌ನ ಪೆಟ್ರೋಲ್ ಸ್ಟೇಶನ್ ಬಳಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೆ ರವಿತೇಜ ಎಂದು ಗುರುತಿಸಲಾಗಿದ್ದು, ಅವರು ಹೈದರಾಬಾದ್‌ನ ಚೈತನ್ಯಪುರಿ ಪ್ರದೇಶದ ಆರ್‌ಕೆ ಪುರಂನವರು ಎಂದು ಮೂಲಗಳು ತಿಳಿಸಿವೆ. ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ಹೋಗಿದ್ದ ರವಿತೇಜ ಇತ್ತೀಚೆಗಷ್ಟೇ ಕೋರ್ಸ್ ಮುಗಿಸಿದ್ದು,ಉದ್ಯೋಗದ ಹುಡುಕಾಟದಲ್ಲಿದ್ದರು ಎನ್ನಲಾಗಿದೆ.