(ನ್ಯೂಸ್ ಕಡಬ) newskadaba.com ಕಡಬ, ಜ.17. ಅಪ್ರಾಪ್ತ ವಯಸ್ಸಿನ ಯುವಕರು ಬೈಕ್ ಚಲಾಯಿಸುವುದರ ವಿರುದ್ಧ ಕಡಬ ತಹಶೀಲ್ದಾರರಾದ ಪ್ರಭಾಕರ ಖಜೂರೆಯವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಆದೇಶ ಈ ಕೆಳಗಿನಂತಿದೆ.
ಪ್ರಸ್ತಾವನೆ:-
1988 5 5, 4 0 181 IMV d ಪ್ರಕಾರ ಅಪ್ರಾಪ್ತ ವಯಸ್ಸಿನ ಮಕ್ಕಳು, ಕಲಂ, 3(1) ರ ಜೊತೆ 181 IMV ರ ಪ್ರಕಾರ ಪರವಾನಗಿ ರಹಿತ ವಾಹನ ಚಾಲನೆ ಮತ್ತು ಕಲಂ, 5(1) ರ ಜೊತೆ 181 IMV ರ ಪ್ರಕಾರ ವಾಹನವನ್ನು ಚಾಲನೆಗೆ ಕೊಡುವುದು ಕಾಯ್ದೆಯ ಉಲ್ಲಂಘನೆಯಾಗಿರುತ್ತದೆ. ಆದರೆ ಕಡಬ ತಾಲೂಕಿನ ಹಲವೆಡೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪರವಾನಿಗೆ ರಹಿತ ವ್ಯಕ್ತಿಗಳು ವಾಹನೆ ಚಾಲನೆ ಮಾಡುತ್ತಿರುವುದು ಹಾಗೂ ಅದರಿಂದಾಗಿ ಅವಘಡಗಳು ಸಂಭವಿಸುತ್ತಿರುವುದು ಕಂಡುಬರುತ್ತಿದೆ.
ಉಲ್ಲೇಖಿತ ಪ್ರಕರಣದಲ್ಲಿ ಕಡಬ ತಾಲೂಕು, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿತ್ ಎನ್ನುವ ವಿದ್ಯಾರ್ಥಿ 10 ನೇ ತರಗತಿಯಲ್ಲಿ ಓದುತ್ತಿದ್ದು, ದಿನಾಂಕ 17-01-2025 ರಂದು ಮುಂಜಾನೆ ಶಾಲೆಗೆ ದ್ವಿಚಕ್ರ ವಾಹನದಲ್ಲಿ ಹೊರಟು ಬರುತ್ತಿದ್ದಾಗ ರಸ್ತೆ, ಅಪಘಾತ ಸಂಭವಿಸಿರುವುದಾಗಿದೆ. ಅಪಘಾತದ ತೀವ್ರತೆಗೆ ಆಶಿತ್ ರವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ, ಉಲ್ಲೇಖಿತ ಪತ್ರಿಕಾ ವರದಿಯಲ್ಲಿ ಇಲಾಖೆಯ ನಿರ್ಲಕ್ಷತೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮ ವಹಿಸುವುದು ತಾಲೂಕು ಆಡಳಿತದ ಕರ್ತವ್ಯವಾಗಿರುತ್ತದೆ.
ಮೋಟಾರು ವಾಹನ ಕಾಯಿದೆಯ ಉಲ್ಲಂಘನೆಯನ್ನು ತಡೆಯಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಬಾಹಿರವಾಗಿರುವ “ಅಪ್ರಾಪ್ತ ವಯಸ್ಕರ ವಾಹನ ಚಾಲನೆ” ಮತ್ತು ಪರವಾನಿಗೆ ರಹಿತ ವ್ಯಕ್ತಿಗಳ ವಾಹನ ಚಾಲನೆ” ಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಭಾಕರ ಖಜೂರೆ, ತಹಶೀಲಾರರು ಹಾಗೂ ತಾಲೂಕು ದಂಡಾಧಿಕಾರಿಯಾದ ನಾನು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಾಹನ ಚಾಲನೆ, ಪರವಾನಿಗೆ ರಹಿತ ವ್ಯಕ್ತಿಗಳ ವಾಹನ ಚಾಲನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ವಾಹನ ನೀಡುವ ಪೋಷಕರ ಮೇಲೆ ದಂಡ ವಿಧಿಸುವಂತೆ ಮತ್ತು ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮವಹಿಸಲು ಠಾಣಾಧಿಕಾರಿಗಳು ಕಡಬ, ಉಪ್ಪಿನಂಗಡಿ, ಬೆಳ್ಳಾರೆ, ಸುಬ್ರಹ್ಮಣ್ಯ ಇವರಿಗೆ ಆದೇಶಿಸಿದೆ. ಮುಂದುವರೆದು ಕಡಬ ತಾಲೂಕು ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನವನ್ನು ತರದಂತೆ ಸೂಚಿಸಿ, ಶಾಲಾ ಕಾಲೇಜು ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು ತಮ್ಮ ಶಾಲಾ ಹಂತದಲ್ಲಿ, ಪೋಷಕರ ಸಭೆಯನ್ನು ನಡೆಸಿ, ಮೇಲ್ಕಂಡ ವಿಷಯವನ್ನು ಪ್ರಸ್ತಾಪಿಸಿ, ಸದರಿ ಸಭೆಯ ಛಾಯಾಚಿತ್ರ ಹಾಗೂ ನಡವಳಿಯನ್ನು ಈ ಕಛೇರಿಗೆ ಸಲ್ಲಿಸಲು ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಲೂಕಿನ ಎಲಾ, ಸರಕಾರಿ, ಖಾಸಗಿ, ಅನುದಾನಿತ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಆದೇಶಿಸಿದೆ. ಮುಂದೆ ಇಂತಹ ಅವಘಡಗಳು ಸಂಭವಿಸಿದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಈ ಮೂಲಕ ತಿಳಿಸಿದೆ. ಎಂದು ಆದೇಶಿಸಲಾಗಿದೆ.