ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕ ಮೃತ್ಯು..!           

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 02. ನಡೆದುಕೊಂಡು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಚೆರ್ಕಳದಲ್ಲಿ ನಡೆದಿದೆ.

ಮೃತ ಬಾಲಕನನ್ನು ಆಶಿಕ್ ಮತ್ತು ಝುಬೈದಾ ದಂಪತಿ ಪುತ್ರ ಅಬ್ದುಲ್ ವಾಹಿದ್ (3) ಎಂದು ಗುರುತಿಸಲಾಗಿದೆ. ಚೆರ್ಕಳ ಬಸ್ ನಿಲ್ದಾಣದಲ್ಲಿ ಬಸ್ ಹಿಂದಕ್ಕೆ ಚಲಿಸುವಾಗ ಈ ಘಟನೆ ಸಂಭವಿಸಿದೆನ್ನಲಾಗಿದೆ. ಬಸ್ ಡಿಕ್ಕಿಯಾದ ವೇಳೆ ಮಗುವಿನ ಜೊತೆಗಿದ್ದ ತಾಯಿಯು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

Scroll to Top