(ನ್ಯೂಸ್ ಕಡಬ) newskadaba.com ಜ.01: ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ ತಿಳಿಸಿದೆ.
ಹೊಸ ವರ್ಷದ ಮೊದಲ ದಿನ ಸಂಭವಿಸಿದ ಈ ಕಂಪನದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಕಂಪನವು ಇಂದು ಬೆಳಗ್ಗೆ 10.24ಕ್ಕೆ ದಾಖಲಾಗಿದೆ. ಅದರ ಕೇಂದ್ರಬಿಂದುವು ಭಚೌದಿಂದ ಈಶಾನ್ಯ ಪೂರ್ವಕ್ಕೆ 23 ಕಿಲೋಮೀಟರ್ ದೂರದಲ್ಲಿ ಇದೆ ಎಂದು ಗಾಂಧಿನಗರ ಮೂಲದ ISR ಹೇಳಿದೆ.