ರಾಜಕೀಯದ ಮೇಲಾಟವೋ…? ಸರಕಾರದ ಇಚ್ಚಾಶಕ್ತಿಯ ಕೊರತೆಯೋ..? ► ಅಂತೂ ಕಡಬ ತಾಲೂಕು ಉದ್ಘಾಟನೆಗೆ ಬಿತ್ತು ಬ್ರೇಕ್….!!

(ನ್ಯೂಸ್ ಕಡಬ) newskadaba.com ಕಡಬ, ಮಾ.27. ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ನೂತನ ಕಡಬ ತಾಲೂಕು ರಚನೆಯ ಕನಸು ನನಸಾಗುವ ಹಂತಕ್ಕೆ ತಲುಪಿದ್ದರೂ ಇದೀಗ ರಾಜಕೀಯದ ಮೇಲಾಟದಿಂದಲೋ..? ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದಲೋ..? ಕಡಬ ತಾಲೂಕು ಉದ್ಘಾಟನೆಗೆ ಬ್ರೇಕ್ ಬಿದ್ದಿದೆ.

ಎರಡೆರಡು ಬಾರಿ ದಿನಾಂಕ ನಿಗದಿಯಾಗಿ ಕಾರಣಾಂತರಗಳಿಂದಾಗಿ ಮುಂದೂಡಲಾಗಿದ್ದ ಕಡಬ ತಾಲೂಕು ಉದ್ಘಾಟನೆಯು ಮಾರ್ಚ್ 27 ರಂದು ನಡೆಯಲಿದೆ ಎಂದು ಜಿಲ್ಲಾಡಳಿತದ ವತಿಯಿಂದ ಅಧಿಕೃತ ದಿನಾಂಕ ಘೋಷಣೆಯಾದ ನಂತರ ಕಡಬದಲ್ಲಿ ಸಮಾಧಾನಕರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಡಬ ತಾಲೂಕು ಉದ್ಘಾಟನಾ ಕಾರ್ಯಕ್ರಮಕ್ಕೆ‌ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಹಲವು ದಶಕಗಳ ಕನಸು ಕೊನೆಗೂ ಕನಸಾಗಿಯೇ ಉಳಿದಿದೆ‌.

ಈ ಹಿಂದೆ ಜಗದೀಶ್ ಶೆಟ್ಟರ್ ನೇತೃತ್ವದ ಸರಕಾರವು ಕಡಬ ಸೇರಿದಂತೆ ಒಟ್ಟು 43 ತಾಲೂಕುಗಳನ್ನು ಘೋಷಣೆ ಮಾಡಿತ್ತು. 2018 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು 43 ತಾಲೂಕುಗಳನ್ನು ಸೇರಿಸಿ ಒಟ್ಟು 49 ತಾಲೂಕುಗಳನ್ನು ಅನುಷ್ಠಾನಕ್ಕೆ ತಂದಿತ್ತು. ಅದರಲ್ಲಿ ಕೆಲವು ಕಡೆಗಳಲ್ಲಿ ನೂತನ ತಾಲೂಕುಗಳ ಉದ್ಘಾಟನಾ ಕಾರ್ಯವೂ ನಡೆದಿತ್ತು. ಆದರೆ ವಿವಿಧ ಇಲಾಖೆಗಳಿಗೆ ಬೇಕಾದ ಹಣ ಬಿಡುಗಡೆ ಗೊಳಿಸದೆ ಹಾಗೂ ಕಾರ್ಯಾರಂಭಗೊಳಿಸದೆ ಇರುವುದರಿಂದ ನೂತನ ತಾಲೂಕಿನ ಕನಸು ಕನಸಾಗಿಯೇ ಬಾಕಿಯಾದೆ.

Also Read  ಕಾಣಿಯೂರಿನ ಯುವಕನಲ್ಲಿ ಕೊರೋನಾ ದೃಢ ➤ ಯುವಕ ಭೇಟಿ ನೀಡಿದ್ದ ಖಾಸಗಿ ಆಸ್ಪತ್ರೆ ಸೀಲ್ ಡೌನ್

ಇನ್ನೊಂದೆಡೆ ವಿಧಾನಸಭಾ ಚುನಾವಣೆಗೆ ಮಾರ್ಚ್ 27 ರಂದೇ ದಿನಾಂಕ ನಿಗದಿಯಾಗುವ ಸಂಭವವಿದ್ದು, ಚುನಾವಣಾ ಆಯೋಗವು ಈ ಬಗ್ಗೆ ಇಂದು ದೇಶದ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜಕೀಯದ ಮೇಲಾಟವೋ… ಸರಕಾರದ ಇಚ್ಚಾಶಕ್ತಿ ಕೊರತೆಯೋ.. ಅಂತೂ ಕಡಬ ತಾಲೂಕು ಉದ್ಘಾಟನೆಗೆ ಬ್ರೇಕ್ ಬಿದ್ದಿತು.

Also Read  ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ➤ ಮನೋಜ್‍ಗೆ ಹೆಚ್ಚುವರಿ ಅಂಕ

error: Content is protected !!
Scroll to Top