ಕಡಬ: ಬೈಕಿಗೆ ಪಿಕಪ್ ಢಿಕ್ಕಿ, ಸವಾರನಿಗೆ ಗಾಯ ► ಪೊಲೀಸ್ ಠಾಣೆಗೆ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು – ಕಡಬದಲ್ಲಿ ಉದ್ವಿಗ್ನ ಪರಿಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ಮಾ.26. ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಡಬದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗಾಯಾಳು ಬೈಕ್ ಸವಾರನನ್ನು ಕೋಡಿಂಬಾಳ‌ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಈತ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪಿಕಪ್ ಢಿಕ್ಕಿ ಹೊಡೆದಿದೆ. ಪಿಕಪ್ ಚಾಲಕ ರಾಜು ಎಂಬಾತ ಕೆಲದಿನಗಳ ಹಿಂದೆ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದು, ಆ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಅಪಘಾತ ಎಸಗಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬ ಠಾಣೆಯ ಮುಂಭಾಗದಲ್ಲಿ ಜಮಾಯಿಸತೊಡಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ನಡುವೆ ಹನ್ನೆರಡು ಜನರ ತಂಡವೊಂದು ತನ್ನ ಮೇಲೆ ಹಲ್ಲೆ‌ ನಡೆಸಲು ಬಂದಿದೆಯೆಂದು ರಾಜು ಕೂಡಾ ಆರೋಪಿಸಿದ್ದಾರೆ‌.

Also Read  ಕಡಬ: ತಾಲೂಕು ವಿಕಲಚೇತನರ ವೈದ್ಯಕೀಯ ಶಿಬಿರ

error: Content is protected !!
Scroll to Top