‘ಕಾಡಾನೆಗಳನ್ನು ಗುಂಡಿಕ್ಕಿ ಸಾಯಿಸಬೇಕು’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ಷಮೆ ಕೇಳಬೇಕು’- ನವೀನ್ ಸಾಲ್ಯಾನ್

(ನ್ಯೂಸ್ ಕಡಬ) newskadaba.com ಡಿ. 16 ಉಡುಪಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ “ಕಾಡಾನೆಗಳನ್ನು ಗುಂಡಿಕ್ಕಿ ಸಾಯಿಸಬೇಕು” ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಇವರು ಶಾಸಕ ಸ್ಥಾನಕ್ಕೆ ನಾಲಾಯಕ್,  ಅರಣ್ಯ ಭೂಮಿಯಲ್ಲಿ ನಡೆಯುತ್ತಿರುವ ಎಸ್ಟೇಟ್ ಗಳ ಒತ್ತುವರಿಯ ಅಕ್ರಮ ಗಣಿಗಾರಿಕೆ, ಅಕ್ರಮ ಹೋಂ ಸ್ಟೇಗಳನ್ನು ತೆರವುಗೊಳಿಸಲು ಧೈರ್ಯ ಮಾಡಲಿ ಎಂದು ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲ್ಯಾನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡುವ ಶಾಸಕ ಹರೀಶ್ ಪೂಂಜಾ ಕಾಡನ್ನು ಒತ್ತುವರಿ ಮಾಡಿಕೊಂಡು ಪರಿಸರ ನಾಶ ಪಡಿಸುತ್ತಿರುವ ಅಕ್ರಮ ಗಣಿಗಾರಿಕೆ ಮಾಡಿ ಪರಿಸರ, ಅರಣ್ಯ ನಾಶ ಪಡಿಸುತ್ತಿರುವ ದಂದೆಕೋರರನ್ನು ಮಟ್ಟಹಾಕಲು ಪ್ರಯತ್ನ ಮಾಡುವುದನ್ನು ಬಿಟ್ಟು ಇಂಥ ಬಾಲಿಶ ಹೇಳಿಕೆ ನೀಡುವುದು ತರವಲ್ಲ. ಭೂಮಿ ಖಾಲಿ ಮನುಷ್ಯರಿಗಷ್ಟೇ ಅಲ್ಲ,ಇದು ಎಲ್ಲಾ ಜೀವಿಗಳಿಗೂ ಸೇರಿದ್ದು ಎನ್ನುದನ್ನ ಹರೀಶ್ ಪೂಂಜಾ ಮೊದಲು ಅರಿಯಬೇಕು, ಬರೀ ಪ್ರಚಾರದ ತೆವಲಿಗೋಸ್ಕರ ಬೇಕಾಬಿಟ್ಟಿ ಮಾತಾಡುವುದನ್ನು ಜನರು ಗಮನಿಸುತ್ತಿದ್ದಾರೆ. ತಾನು ಸಮಾಜದ ಜವಾಬ್ದಾರಿ ಹೊತ್ತ ಜನಪ್ರತಿನಿಧಿ ಎಂಬುದು ಗಮನದಲ್ಲಿರಬೇಕು.

Also Read  ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತ್ಯು..!

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಚರ್ಚೆ ಮಾಡಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುದು ಉತ್ತಮ ಕಾಡುಪ್ರಾಣಿಗಳ ಬಗ್ಗೆ ಕಡು ಕ್ರೂರ ರೀತಿಯ ಹೇಳಿಕೆ ನೀಡಿರುವುದು ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ, ಈ ರೀತಿಯ ಹೇಳಿಕೆ ನೀಡಿರುವುದುನ್ನು ಹಿಂಪಡೆದು ಸಾರ್ವಜನಿಕ ವಲಯದಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

 

error: Content is protected !!
Scroll to Top