ಮೂರನೇ ಬಾರಿಗೆ ನೂತನ ಕಡಬ ತಾಲೂಕು ಉದ್ಘಾಟನೆಗೆ ಕೂಡಿಬಂತು ಕಾಲ ► ಯಾವಾಗ ಉದ್ಘಾಟನೆ ಎನ್ನುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಕಡಬ, ಮಾ.24. ಎರಡೆರಡು ಬಾರಿ ಮುಂದೂಡಲಾಗಿದ್ದ ಕಡಬ ತಾಲೂಕು ಉದ್ಘಾಟನೆಗೆ ಕೊನೆಗೂ ಗಳಿಗೆ ಕೂಡಿ ಬಂದಿದೆ.

ಮಾರ್ಚ್ 27 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ನೂತನ ಕಡಬ ತಾಲೂಕನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿಂದೆ ಎರಡೆರಡು ಬಾರಿ ದಿನ‌ ನಿಗದಿಯಾಗಿದ್ದರೂ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಕೊನೆಗೂ ನೂತನ ತಾಲೂಕು ಉದ್ಘಾಟನೆಗೆ ಗಳಿಗೆ ಕೂಡಿ ಬಂದಿದೆ.

Also Read  ಸುಳ್ಯದ ವಿವಿಧೆಡೆ ಭೂಮಿ ಕಂಪಿಸಿದ ಅನುಭವ ➤ ಆತಂಕದಲ್ಲಿ ಜನತೆ

error: Content is protected !!
Scroll to Top