ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

(ನ್ಯೂಸ್ ಕಡಬ) newskadaba.com ಮಣಿಪಾಲ, . 19. ಮಣಿಪಾಲ ಸರಳಬೆಟ್ಟು ಬಾಲಮಿತ್ರ ಯಕ್ಷಗಾನ ಮಂಡಳಿಯ ಸಂಚಾಲಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ರಾದ ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನರಾಗಿದ್ದಾರೆ.

ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳಲ್ಲಿ ಬಾಲ ಪ್ರತಿಭೆಗಳನ್ನುರೂಪಿಸಿವಲ್ಲಿ ಬಾಲ ಮಿತ್ರ ಯಕ್ಷಗಾನ ಮಂಡಳಿ ಮಣಿಪಾಲದ ಸರಳ ಬೆಟ್ಟು ವಿನಲ್ಲಿ ಸ್ಥಾಪಿಸಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಸೌತ್ ಆಫ್ರಿಕಾ, ದುಬೈ, ಮೊದಲಾದ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದರು . ದೆಹಲಿ, ಮುಂಬೈ ,ಬೆಂಗಳೂರು, ಮೊದಲಾದ ಕಡೆಯಲ್ಲಿಯೂ ಮಕ್ಕಳ ಯಕ್ಷಗಾನದ ಪ್ರದರ್ಶನ ನೀಡಿದ್ದರು. ಮಣಿಪಾಲದ ಕೆಎಂಸಿಯ ಆಸ್ಪತ್ರೆಯಲ್ಲಿ ಕಣ್ಣಿನ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು. ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಕಮಲಾಕ್ಷ ಪ್ರಭು ಅವರಿಗೆ. ಪತ್ನಿ. ಇಬ್ಬರು ಗಂಡು ಮಕ್ಕಳನ್ನು. ಹಾಗೂ ಅಪಾರ ಯಕ್ಷ ಕಲಾಭಿಮಾನಿಗಳನ್ನು. ಮತ್ತು ಬಾಲ ಪ್ರತಿಭೆಗಳನ್ನು ಬಿಟ್ಟು ಅಗಲಿದ್ದಾರೆ.

Also Read  ಅನ್ಯಕೋಮಿನ ಜೋಡಿ ರೆಸಾರ್ಟ್ ನಲ್ಲಿ ಪತ್ತೆ...! ➤ ಪೊಲೀಸ್ ವಶಕ್ಕೆ ನೀಡಿದ ಭಜರಂಗದಳ ಕಾರ್ಯಕರ್ತರು

 

 

error: Content is protected !!
Scroll to Top