ಕೆಲಸದ ವೇಳೆ ಕುಸಿದುಬಿದ್ದು ಕಾರ್ಮಿಕ ಸಾವು: ಮೃತದೇಹವನ್ನು ರಸ್ತೆ ಬದಿ ಇಟ್ಟು ಹೋದ ದುರುಳ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18. ತೀವ್ರ ಅಸ್ವಸ್ಥಗೊಂಡು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು, ಆತನ ಮನೆಯ ಸಮೀಪದ ರಸ್ತೆ ಬದಿಯಲ್ಲಿ ಇಟ್ಟುಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಸಾಲ್ಮರ ತಾರಿಗುಡ್ಡೆ ನಿವಾಸಿ ಶಿವಪ್ಪ ಎಂದು ಗುರುತಿಸಲಾಗಿದ್ದು, ಇವರು ಸಾಲ್ಮರ ಕೆರೆಮೂಲೆ ನಿವಾಸಿ ವುಡ್‌ ಸಂಸ್ಥೆಯೊಂದರ ಮಾಲೀಕ ಹೆನ್ರಿ ತಾವ್ರೋ ಎಂಬುವರ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಶಿವಪ್ಪ ಅವರನ್ನು ಶನಿವಾರ ಬೆಳಗ್ಗೆ ಸ್ಟಾನಿ ಎಂಬಾತ ಕರೆದುಕೊಂಡು ಹೋಗಿದ್ದಾನೆ. ಆದರೆ ಸಂಜೆ ವೇಳೆ ಶಿವಪ್ಪ ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆಂದು ಮನೆ ಮಂದಿ ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

Also Read  ನೂಜಿಬಾಳ್ತಿಲ: ಉಚಿತ ಬ್ಯಾಗ್, ನೋಟ್‍ಬುಕ್ ವಿತರಣೆ

ಶಿವಪ್ಪ ಅವರು ಹೆನ್ರಿಯೊಂದಿಗೆ ಪುತ್ತೂರಿನ ಹೊರಭಾಗದಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ ವೇಳೆ ಅಸೌಖ್ಯಕ್ಕೆ ಒಳಗಾಗಿದ್ದು, ಈ ವೇಳೆ ಮೇಸ್ತ್ರಿ ಅವರನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

error: Content is protected !!
Scroll to Top