(ನ್ಯೂಸ್ ಕಡಬ) newskadaba.com ಹಾಸನ, ನ. 18. ಇರಾಕ್‍ನ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ರಸ್ತೆ ಬದಿ ಇರಿಸಿದ್ದ ಬಾಂಬ್ ಸ್ಫೋಟಿಸಿ ಮೂವರು ಯೋಧರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇರಾಕ್ ನ ಸಲಾದೀನ್ ಪ್ರಾಂತದ ಆಗ್ನೇಯದಲ್ಲಿರುವ ತುಜ್ ಖರ್ಮಾತು ಪಟ್ಟಣದ ಬಳಿ ರವಿವಾರ ನಡೆದ ಸ್ಫೋಟದಲ್ಲಿ ಇತರ ಮೂವರು ಯೋಧರು ತೀವ್ರವಾಗಿ ಗಾಯಗೊಂಡಿರುವುದಾಗಿ ಭದ್ರತಾ ಪಡೆಯ ಮೂಲಗಳು ಹೇಳಿವೆ. ರಸ್ತೆ ಬದಿ ಇರಿಸಲಾಗಿದ್ದ ಸ್ಫೋಟಕವನ್ನು ಇರಾಕ್ ಸೇನೆಯ ಗಸ್ತುವಾಹನ ಬರುತ್ತಿದ್ದಂತೆಯೇ ದೂರ ನಿಯಂತ್ರಕ ಸಾಧನದ ಮೂಲಕ ಸ್ಫೋಟಿಸಲಾಗಿದೆ. ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ. ಭದ್ರತಾ ಪಡೆಗಳು ತನಿಖೆ ನಡೆಸುತ್ತಿವೆ ಎಂದು ವರದಿ ಹೇಳಿದೆ.
Also Read ಕಡಬ: ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರಾಗಿ ➤ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮೋಹನ್ ಕೆರೆಕೋಡಿ ಆಯ್ಕೆ