ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ

(ನ್ಯೂಸ್ ಕಡಬ) newskadaba.com . 16. ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಮಕ್ಕಳು ಸಜೀವ ದಹನ ಆಗಿರುವ ದಾರುಣ ಘಟನೆ ನಡೆದಿದೆ.

ವಾರ್ಡ್‌ನಲ್ಲಿದ್ದ ಸಿಬ್ಬಂದಿ ಪ್ರಕಾರ, ರಾತ್ರಿ 10:35 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 10 ಮಕ್ಕಳು ಮೃತಪಟ್ಟಿದ್ದಾರೆ. ಮೂವತ್ತೇಳು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಕ್ಕಳ ವಾರ್ಡ್‌ನ ಎರಡು ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಕರಣದ ತನಿಖೆಗೆ ಕ್ರಮವಹಿಸಲಾಗಿದೆ ಎಂದು ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

Also Read  ಡೇಟಿಂಗ್ ಆ್ಯಪ್ ಮೂಲಕ ಹುಡುಗಿ ಹೆಸರಿನಲ್ಲಿ ವಂಚನೆ - ಇಬ್ಬರ ಬಂಧನ

 

error: Content is protected !!
Scroll to Top