ಖಬರ್ ಸ್ತಾನಗಳಿಗೆ ಸರಕಾರಿ ಭೂಮಿ ನೀಡಲು ಮುಂದಾದ ರಾಜ್ಯ ಸರಕಾರ..!

(ನ್ಯೂಸ್ ಕಡಬ) newskadaba.com ನ. 15. ಈಗಾಗಲೇ ರಾಜ್ಯದಲ್ಲಿ ‘ವಕ್ಫ್’ ವಿವಾದದಿಂದ ವಿಪಕ್ಷಗಳು ಹಾಗೂ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದರ ನಡುವೆಯೇ ಮುಸ್ಲಿಮರ ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮತ್ತೊಂದು ವಿವಾದವನ್ನು ರಾಜ್ಯ ಸರ್ಕಾರ ಮೈ ಮೇಲೆ ಎಳೆದುಕೊಂಡಿಂತಾಗಿದೆ.

ರಾಜ್ಯ ಸರಕಾರ ಖಬರಸ್ಥಾನಗಳಿಗೆ ಸರ್ಕಾರಿ ಕಂದಾಯ ಭೂಮಿ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ಆದೇಶ ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ಸುಮಾರು 328 ಖಬರಸ್ಥಾನಗಳಿಗೆ ಸರಕಾರಿ ಭೂಮಿಯನ್ನು ನೀಡಲು ಮುಂದಾಗಿರುವ ಸರಕಾರ ಸುಮಾರು 2075 ಎಕರೆ ಭೂಮಿಯನ್ನು ಮಂಜೂರಾತಿ ನೀಡಲು ಸಿದ್ಧತೆ ಮಾಡಿಕೊಂಡಿದೆರುವುದಾಗಿ ತಿಳಿದುಬಂದಿದೆ.

Also Read  ಕಡಬದಲ್ಲಿ ಈ ವಾರವೂ ಸಂಡೇ ಲಾಕ್ ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ

ಬೆಂಗಳೂರು, ರಾಯಚೂರು, ಕಲಬುರ್ಗಿ, ಹಾಸನ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಮಿ ನೀಡಲು ಸರ್ಕಾರ ಮುಂದಾಗಿದೆ. ವಕ್ಫ್ ಅಧೀನದ ಮಸೀದಿಯಲ್ಲಿರುವ ಖಬರಸ್ತಾನಗಳು ಹಾಗೂ ಪ್ರಾರ್ಥನಾ ಮಂದಿರದ ಅಧೀನದಲ್ಲಿರುವ ಖಬರಸ್ಥಾನಗಳಿಗೆ ಜಮೀನು ನೀಡಲು ಮುಂದಾಗಿದೆ.

ಈ ಕುರಿತು ಖಬರಸ್ಥಾನಗಳಿಗೆ ಭೂಮಿ ನೀಡುವಂತೆ ಸರ್ಕಾರವು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹಿಂದೆಯೇ ಆದೇಶ ನೀಡಿತ್ತು. ಏಪ್ರಿಲ್ 16 ರಂದು ಸರ್ಕಾರದ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸೂಚಿಸಿದ್ದರು.

error: Content is protected !!
Scroll to Top