’ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೂ ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡಿಲ್ಲ’-  ನಿರ್ಮಲಾ ಸೀತಾರಾಮನ್

(ನ್ಯೂಸ್ ಕಡಬ) newskadaba.com . 14. ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೂ ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡಿಲ್ಲ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಮಾಡುತ್ತಿರುವ ಆರೋಪ ಆಧಾರರಹಿತವಾದದ್ದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬುಧವಾರ ಸಿಟಿಜನ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾದ ಅನೌಪಚಾರಿಕ ಸಂವಾದ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಜಗತ್ತಿನಲ್ಲೇ ಐದನೇ ಅತಿದೊಡ್ಡ ಆರ್ಥಿಕತೆ ಯಾಗಿರುವುದಕ್ಕೆ ಪರಿಣಾಮಕಾರಿ ನಾಯಕತ್ವ ಹಾಗೂ ರಾಷ್ಟ್ರದ ನೀತಿಗಳೂ ಕಾರಣವಾಗಿವೆ. ಮೂರನೇ ಬಾರಿಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಡಿಜಿಟಲ್ ಮೂಲಸೌಕರ್ಯ, ವಿತ್ತೀಯ ಸೇರ್ಪಡೆ ಹಾಗೂ ಯುವಜನರ ಕೌಶಲ ಸುಧಾರಣೆಗೆ ಆದ್ಯತೆ ನೀಡುವ ಖಚಿತ ನಿರ್ದೇಶನಗಳನ್ನು ಹೊಂದಿದೆ ಎಂದರು.

Also Read  ಉಳ್ಳಾಲ ಸಮುದ್ರತೀರದಲ್ಲಿ ತಿಮಿಂಗಿಲ ಪ್ರಭೇದದ ಕಡಲು ಹಂದಿ ಪತ್ತೆ

 

 

error: Content is protected !!
Scroll to Top