ಅಂತಾರಾಷ್ಟ್ರೀಯ ಯೋಗ ಗುರು ಹೃದಯಾಘಾತದಿಂದ ನಿಧನ



(ನ್ಯೂಸ್ ಕಡಬ) newskadaba.com ಮೈಸೂರು, . 13. ಮೈಸೂರು ಮೂಲದ ಖ್ಯಾತ ಅಂತಾರಾಷ್ಟ್ರೀಯ ಯೋಗ ಗುರು ಶರತ್‌ ಜೋಯಿಸ್‌ (53) ಅವರು ಅಮೆರಿಕದಲ್ಲಿ ಕೊನೆಯುಸಿರೆಳೆದಿದ್ದಾರೆ.







ಶರತ್‌ ಜೋಯಿಸ್‌ ಅವರು ಯೋಗಾಭ್ಯಾಸ ಮತ್ತು ಯೋಗಪಾಠಕ್ಕೆ ತಮ್ಮ ಬದುಕನ್ನು ಮೀಸಲಾಗಿಟ್ಟಿದ್ದರು. ಖ್ಯಾತ ಪಾಪ್‌ ಗಾಯಕಿ ಮಡೋನಾ ಸೇರಿದಂತೆ ಹಲವರಿಗೆ ಯೋಗ ಕಲಿಸಿದ ಖ್ಯಾತಿಯೂ ಅವರಿಗಿದೆ. ಅವರು ಹೆಸರಾಂತ ಯೋಗ ಗುರು ಮೈಸೂರು ಮೂಲದ ಕೆ. ಪಟ್ಟಾಭಿ ಜೋಯಿಸ್‌ ಅವರ ಮೊಮ್ಮಗರಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ಅವರು ಯೋಗಗುರುವಾಗಿ ತಾತನ ಹಾದಿಯಲ್ಲೇ ಸಾಗಿದ್ದರು. ವರ್ಜೀನಿಯಾದಲ್ಲಿ ಯೋಗ ತರಗತಿ ನಡೆಸುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.






 

error: Content is protected !!
Scroll to Top