(ನ್ಯೂಸ್ ಕಡಬ) newskadaba.com, ನ. 12. ದೇಶಕ್ಕೆ ಬರುವಂತಹ ಸಮಕಾಲೀನ ಬೆದರಿಕೆಗಳನ್ನು ನಿಭಾಯಿಸುವ ಸಲುವಾಗಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂದು ದೆಹಲಿ ರಕ್ಷಣಾ ಮಾತುಕತೆ- 2024ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಒತ್ತು ನೀಡಿ, ಬಾಹ್ಯ ಬೆದರಿಕೆಗಳ ವಿರುದ್ಧವೂ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ಮಾತ್ರವಲ್ಲದೆ, ಅನೇಕ ದೇಶಗಳು ವಿವಿಧ ರೂಪದ ಭದ್ರತಾ ಸವಾಲುಗಳನ್ನು ಎದುರಿಸುತ್ತಿವೆ. ಈ ಹಿಂದೆ ಗಡಿ ಸಂಬಂಧಿತ ಬೆದರಿಕೆಗಳು ಪ್ರಮುಖವಾಗಿದ್ದವು. ಆದರೆ ಈಗ ಭಯೋತ್ಪಾದನೆ, ಸೈಬರ್ ದಾಳಿಗಳು ಮತ್ತು ಹೈಬ್ರಿಡ್ ಯುದ್ಧ ವಿಷಯಗಳು ಸಹ ಪ್ರಮುಖವಾಗುತ್ತಿವೆ. ಇವನ್ನು ಎದುರಿಸಲು ಆಧುನಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.