ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ – News Kadaba

ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ನ. 09. ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಹಾಗೂ ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬ ಇದರ ಆಶ್ರಯದಲ್ಲಿ ನಡೆದ ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆ ಸ್ಪರ್ಧೆಯಲ್ಲಿ ಶಾರ್ವಿ ಎಸ್. ರೈ (6ನೇ ತರಗತಿ) ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ಶಾಶ್ವತ್ ವಿ.ಎ. (6ನೇ ತರಗತಿ) ಪ್ರಥಮ ಸ್ಥಾನ, ಕನ್ನಡ ಕವನ ವಾಚನದಲ್ಲಿ ಕೃತಿ ಎನ್.ಪಿ. (7ನೇ ತರಗತಿ) ದ್ವಿತೀಯ ಸ್ಥಾನ, ಇಂಗ್ಲೀಷ್ ಕಂಠಪಾಠದಲ್ಲಿ ಹವನ್ ಎ.ವೈ. (7ನೇ ತರಗತಿ), ಸಂಸ್ಕೃತ ಧಾರ್ಮಿಕ ಪಠಣದಲ್ಲಿ ದ್ವಿಜಾ ಎಚ್. (6ನೇ ತರಗತಿ) ದ್ವಿತೀಯ ಸ್ಥಾನ ಮತ್ತು ಆಶುಭಾಷಣದಲ್ಲಿ ತೃತೀಯ ಸ್ಥಾನ, ಕಥೆ ಹೇಳುವುದರಲ್ಲಿ ಸಾನ್ವಿ ಎಸ್. (5ನೇ ತರಗತಿ) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗದ ಕ್ಲೇಮಾಡೆಲಿಂಗ್ ಸ್ಪರ್ಧೆಯಲ್ಲಿ ಸ್ವರಾಜ್ ಪಿ.ಬಿ (4ನೇ ತರಗತಿ) ಪ್ರಥಮ ಸ್ಥಾನ, ಆಶುಭಾಷಣದಲ್ಲಿ ಯಶ್ವಿನ್ ಕೆ. (4ನೇ ತರಗತಿ) ಪ್ರಥಮ ಸ್ಥಾನ, ಛದ್ಮವೇಷದಲ್ಲಿ ಆರ್ವಿ ರಾಜೇಶ್ (2ನೇ ತರಗತಿ) ದ್ವಿತೀಯ ಸ್ಥಾನ, ಅಭಿನಯ ಗೀತೆಯಲ್ಲಿ ಇಹಾ ಎನ್. (2ನೇ ತರಗತಿ) ದ್ವಿತೀಯ ಸ್ಥಾನ, ಕಥೆ ಹೇಳುವುದರಲ್ಲಿ ಶಾನ್ವಿ ಸಿ. (3ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ. ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಅಭಿನಂದಿಸಿರುತ್ತಾರೆ.

Scroll to Top