ವಾಷಿಂಗ್ ಮೆಷಿನ್ ಬಳಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

(ನ್ಯೂಸ್ ಕಡಬ) newskadaba.com  ನ. 07: ಆಧುನಿಕ ಯುಗದಲ್ಲಿ ಎಲ್ಲಾ ಕೆಲಸವೂ ಸಾಂಪ್ರದಾಯಿಕ ಪದ್ದತಿಗಿಂತ ಬಹಳ ಸುಲಭವೇ ಆಗಿಬಿಟ್ಟಿದೆ. ಈ ವಾಷಿಂಗ್ ಮೆಷಿನ್ ಬಂದಾಗಿನಿಂದ ಅಂತೂ ಬಟ್ಟೆ ಒಗೆಯುವುದಂತೂ ಇನ್ನೂ ಸುಭವಾಗಿ ಬಿಟ್ಟಿದೆ. ಈ ಮೆಷಿನ್ ನಲ್ಲಿ ಬಟ್ಟೆ ಒಗೆಯುವುದು ಕೆಲವೇ ನಿಮಿಷಗಳ ಕೆಲಸವಾಗಿದೆ.

ಹೀಗಾಗಿಯೇ  ಐಷರಾಮಿ ವಸ್ತುಗಳಿಗಿಂತ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಕಾಣಸಿಗುವ ಜನಪ್ರಿಯ ವಸ್ತುವಾಗಿದೆ. ಈ ಮೆಷಿನ್ ಬಗ್ಗೆ ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಈ ರೀತಿಯ ಕೆಲವು ಸಣ್ಣ ಸಣ್ಣ ತಪ್ಪುಗಳಿಂದ ಮೆಷಿನ್ ಗೆ ತೊಂದರೆಯುಂಟಾಗುವ ಸಾಧ್ಯತೆಯಿದೆ.

  • ಒಂದೇ ಬಾರಿಗೆ ಅತಿಹೆಚ್ಚು ಬಟ್ಟೆಗಳನ್ನು ಹಾಕುವುದು: ಹೆಚ್ಚಿನವರು ಒಂದು ವಾರದ ಬಟ್ಟೆಯನ್ನು ಒಮ್ಮೆಗೆ ತೊಳೆಯುವ ರೂಢಿಯನ್ನು ಹೊಂದಿದ್ದು, ಒಮ್ಮೆಲೇ ಆ ಎಲ್ಲಾ ಬಟ್ಟೆಗಳನ್ನು ಮೆಷಿನ್ ಗೆ ಸುರಿಯುತ್ತಾರೆ. ಆದರೆ ಈ ನಿಮ್ಮ ಹವ್ಯಾಸ ನಿಮ್ಮ ವಾಷಿಂಗ್  ಮೆಷಿನ್ ನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಮ್ಮೆಲೇ ಬಟ್ಟೆಗಳನ್ನು ಹಾಕುವ ಬದಲಾಗಿ 2-3 ಬಾರಿ ಬಟ್ಟೆಗಳನ್ನು ಹಾಕಿದಾಗ ಯಂತ್ರದ ಮೇಲೆ ಹೆಚ್ಚಿನ ಲೋಡ್ ಬೀಳುವುದಿಲ್ಲ.
Also Read  ಕಡಬ: ಅಗಸ್ತ್ಯ ಇಲೆಕ್ಟ್ರಾನಿಕ್ & ಇಲೆಕ್ಟ್ರಿಕಲ್ಸ್ ಶುಭಾರಂಭ ➤ ಬಯೋ ಮೆಟ್ರಿಕ್, ಸಿಸಿ ಟಿವಿ ಮೊದಲಾದ ಇಲೆಕ್ಟ್ರಾನಿಕ್ ಸೇವೆ ಒಂದೇ ಸೂರಿನಡಿ ಲಭ್ಯ

 

  • ಸರಿಯಾದ ಜಾಗದಲ್ಲಿ ಇಡದಿದ್ದರೆ:   ಮೆಷಿನ್ ಅನ್ನು ಉಪಯೋಗಿಸುವಾಗ ಸಮ ಮೇಲ್ಮೈ ಜಾಗದಲ್ಲಿ ಇರಿಸದಿದ್ದರೆ ಅಂದರೆ ಇಳಿಜಾರುವಿನಂತಹ ಜಾಗದಲ್ಲಿ ಇರಿಸಿದಾಗ ಮೆಷಿನ್ ಗೆ ಹಾನಿಯಾಗುವಂತಹ ಸಂಭವ ಹೆಚ್ಚಿರುತ್ತದೆ.

 

  • ಒದ್ದೆ ಬಟ್ಟೆಯ ದೀರ್ಘ ಕಾಲದ ಇರಿಸುವಿಕೆ: ಕೆಲ ಜನರು ಒಗೆದ ೊದ್ದೆ ಬಟ್ಟೆಗಳನ್ನು ದೀರ್ಘ ಕಾಲದವರೆಗೆ ಬಿಡುವುದೂ ಸಹ ವಾಷಿಂಗ್ ಮೆಷಿನ್ ಅನ್ನು ಹದಗೆಡಿಸುವಲ್ಲಿ ಪಾತ್ರವಹಿಸುತ್ತದೆ.

  • ಅತಿಯಾದ ಡಿಟರ್ಜೆಂಟ್ ನ ಬಳಕೆ: ಅತಿಯಾದ ಡಿಟರ್ಜೆಂಟ್ ಬಳಕೆಯಿಂದಾಗಿ ಹೆಪ್ಪುಗಟ್ಟಿದಂತಾಗುತ್ತದೆ. ಇದರಿಂದ ಮೋಟಾರ್ ಕ್ರಮೇಣ ಜಾಮ್ ಆಗುವ ಸಾಧ್ಯತೆಗಳಿವೆ. ಿದು ಮುಂದೆ ಅತಿಯಾದ ವೆಚ್ಚಕ್ಕೆ ಕಾರಣವಾಗಬಹುದು.
Also Read  ಅಂದುಕೊಂಡ ಕೆಲಸ ಕಾರ್ಯಗಳು ಬೇಗನೆ ಆಗಬೇಕೆಂದರೆ ತಪ್ಪದೇ ಈ ನಿಯಮ ಪಾಲಿಸಿ

 

  • ವಸ್ತ್ರಗಳಲ್ಲಿರುವ ಗಟ್ಟಿ ವಸ್ತುಗಳು: ಕೆಲವು ಜನರು ಬಟ್ಟೆಗಳಲ್ಲಿ ನಾಣ್ಯ, ಪಿನ್ ಈ ರೀತಿಯಾದ ಗಟ್ಟಿ ವಸ್ತುಗಳು ಇವೆಯೇ/ ಇಲ್ಲವೇ ಎಂದು ಪರಿಶೀಲಿಸದೇ ಮೆಷಿನ್ ಗೆ ಹಾಕುವುದರಿಂದ ಮೆಷಿನ್ ನ ಆಂತರಿಕ ಭಾಗಗಳು ಹಾನಿಗೊಳಗಾಗುತ್ತವೆ. ಆದ್ದರಿಂದ ಬಟ್ಟೆಗಳನ್ನು ಮೆಷಿನ್ ಗೆ ಹಾಕುವ ಮೊದಲು ಪರಿಶೀಲಿಸಬೇಕು.
error: Content is protected !!
Scroll to Top