ನಾಪತ್ತೆಯಾಗಿದ್ದ ಮಹಿಳೆ ಪತ್ತೆ..! 5 ವರ್ಷದ ಬಳಿಕ ಒಂದಾದ ತಾಯಿ-ಮಕ್ಕಳು

(ನ್ಯೂಸ್ ಕಡಬ) newskadaba.com ನ. 08. ಐದು ವರ್ಷದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ತಾಯಿಯೋರ್ವರು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಇದರಿಂದ ಮಕ್ಕಳು ಸಂತಸಗೊಂಡಿದ್ದಾರೆ.


ನಾಪತ್ತೆಯಾದ ಮಹಿಳೆಯನ್ನು ಆಸ್ಮಾ ಎಂದು ಗುರುತಿಸಲಾಗಿದೆ. ಮೂಲತಃ ಮುಂಬೈ ಮೂಲದ ಥಾಣೆಯ ಮಂಬ್ರಿಲ್​ ಎಂಬಲ್ಲಿನ ನಿವಾಸಿಯಾದ ಅಸ್ಮಾ ಅವರು, ಕೆಲ ವರ್ಷಗಳ ಹಿಂದೆ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿ ಬಳಿಕ, ದಂಪತಿ ಮುಂಬೈನ ಥಾಣೆಯ ಮಂಬ್ರಿಲ್​ನಲ್ಲಿ ವಾಸವಾಗಿದ್ದರು. ಕೆಲ ಸಮಯದ ಬಳಿಕ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಅಸ್ಮಾ, 2019ರ ಮೇ ತಿಂಗಳಿನಲ್ಲಿ ಪತಿ ಮನೆಯಿಂದ ಮುಂಬೈನ ಬೈಕಲಾದಲ್ಲಿರುವ ತವರು ಮನೆಗೆ ರೈಲಿನಲ್ಲಿ ತೆರಳುತ್ತಿದ್ದಾಗ ಆಸ್ಮಾ ನಾಪತ್ತೆಯಾಗಿದ್ದರು. ಬಳಿಕ, ಆಸ್ಮಾ ದಾರಿತಪ್ಪಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಾತ್ರಿ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದ ಆಸ್ಮಾ ಅವರನ್ನು ಕಂಡ ವೈಟ್ ಡೌಸ್ ನಿರ್ಗತಿಕರ ಆಶ್ರಯ ತಾಣದ ಸಂಸ್ಥಾಪಕಿ ಕೊರಿನ್ ರಸ್ಕಿನಾ ರಕ್ಷಣೆ ಮಾಡಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ, ಆಸ್ಮಾ ಅವರ ಕುಟುಂಬಸ್ಥರನ್ನು ಪತ್ತೆ ಹಚ್ಚಲು ಕೊರಿನ್ ರಸ್ಕಿನಾ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಕುಟಂಬದವರ ಸುಳಿವು ಸಿಗಲಿಲ್ಲ. ಆಸ್ಮಾ ಅವರು ಇತ್ತೀಚೆಗೆ ಮುಂಬೈನ ಬೈಕಲಾದ ತವರು ಮನೆಯ ವಿಳಾಸ ನೀಡಿದ್ದರು. ವಿಳಾಸದ ಆಧಾರದ ಮೇಲೆ ಕೊರಿನ್ ರಸ್ಕಿನಾ ಅವರು ಬೈಕಲಾ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾರೆ.

Also Read  ಪ್ರತೀ ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಕ್ರಮ ➤ ಸಚಿವ ಪ್ರಭು ವಿ. ಚೌಹ್ಹಾನ್

ಪೊಲೀಸರು ಈ ವಿಚಾರವನ್ನು ಆಸ್ಮಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಆಸ್ಮಾ ಕುಟುಂಬಸ್ಥರು ವೈಟ್ ಡೌಸ್ ಸಂಸ್ಥೆಗೆ ಸಂಪರ್ಕಿಸಿ, ವಿಮಾನದ ಮೂಲಕ ಮಂಗಳೂರಿಗೆ ಬಂದು ತಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

 

error: Content is protected !!
Scroll to Top