ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 06. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಸಂಬಂಧಿಸಿದ ಭೂಕಂದಾಯ/ ಭೂಮಂಜೂರಾತಿ ನಿಯಮ / ಭೂಸುಧಾರಣಾ/ ಭೂಸ್ವಾಧೀನ ಕಾಯ್ದೆ / ನಿಯಮ ಇನ್ನಿತರ ಕಾಯ್ದೆ/ ನಿಯಮಗಳ ಪ್ರಕರಣಗಳಿಗೆ ಹಾಗೂ ಯಾವುದೇ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ಕಾನೂನು ಸಲಹೆ ನೀಡುವುದು ಕಾನೂನು ಸಲಹೆಗಾರರ ಕರ್ತವ್ಯವಾಗಿದೆ.

ನಿವೃತ್ತ ನ್ಯಾಯಾಧೀಶರು/ ನಿಮ್ಮತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ರೂ.70,000 ಮತ್ತು ನಿವೃತ್ತ ಕಂದಾಯ ಇಲಾಖೆಯ ನೌಕರರಿಗೆ (ನಿವೃತ್ತ ತಹಶೀಲ್ದಾರ್/ ಉಪತಹಶೀಲ್ದಾರ್) ರೂ. 40,000 ಮಾಸಿಕ ಸಂಚಿತ ವೇತನ ನಿಗದಿಗೊಳಿಸಲಾಗಿದೆ.

Also Read  ಎಸ್‍ಎಸ್‍ಎಲ್‍ಸಿ ಹಲವು ಕಾರಣಗಳಿಂದ 285 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರಾಗಿ ನೇಮಕ ಹೊಂದಲು ಇಚ್ಛಿಸುವವರು ಸ್ವ-ವಿವರ ಮತ್ತು ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ನವೆಂಬರ್ 19ರೊಳಗೆ  ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಛೇರಿಯ ಆಡಳಿತ. ಶಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top