(ನ್ಯೂಸ್ ಕಡಬ) newskadaba.com ನ. 06 ಬೆಂಗಳೂರು : ಏಳು ವರ್ಷದ ನಂತರ ಶೀಘ್ರವೇ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯಾಗಲಿದ್ದು, ಕನಿಷ್ಠ ದರ 15 ಗರಿಷ್ಠ ದರ 75 ಸಾಧ್ಯತೆಯಿದೆ. ನಮ್ಮ ಮೆಟ್ರೋ 2011 ರಲ್ಲಿ ಸೇವೆ ಆರಂಭಿಸಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 2ನೇ ಬಾರಿಗೆ ದರ ಪರಿಷ್ಕ ರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ರಚಿಸಿದ್ದ ನಿಗದಿ ಸಮಿತಿ ಅಕ್ಟೋಬರ್ 28ರವರೆಗೆ ಸಾರ್ವಜನಿಕರಿಂದ ಸಲಹೆ, ಸೂಚನೆ, ಆಕ್ಷೇಪಣೆಗಳನ್ನು ಪಡೆದು ಕೊಂಡಿದೆ.
ಮೆಟ್ರೊ ರೈಲ್ವೆ ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರದಿಂದ ರಚಿಸಿದ ಬಿಎಂಆರ್ಸಿಎಲ್‌ನ ಮೊದಲ ದರ ನಿಗದಿ ಸಮಿತಿ ಇದಾಗಿದೆ. ಸದ್ಯ ಕನಿಷ್ಠ ದರ 10 ಹಾಗೂ ಗರಿಷ್ಠ ದರ 60 ಇದೆ. ಸ್ಮಾರ್ಟ್ ಕಾರ್ಡ್, ಕ್ಯೂಆರ್‌ಕೋಡ್ ಟಿಕೆಟ್ ಬಳಸುವವರಿಗೆ ಶೇ.5 ರಿಯಾಯಿತಿ ಇದೆ. ಈಗಾಗಲೇ ವಿಳಂಬವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.