ಇಚಿಲಂಪಾಡಿ: ಮನೆಗೆ ನುಗ್ಗಿ ಬೆದರಿಸಿ ನಗ, ನಗದು ದರೋಡೆಗೈದ ಆಗಂತುಕರ ತಂಡ ► ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.21. ಮನೆಗೆ ನುಗ್ಗಿದ ತಂಡವೊಂದು ಮನೆಯಲ್ಲಿದ್ದವರನ್ನು ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬೆದರಿಸಿ ನಗ- ನಗದು ದರೋಡೆ ಮಾಡಿದ ಘಟನೆ ಇಚಿಲಂಪಾಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಇಚಿಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ನಿವೃತ್ತ ಸೈನಿಕ ನಾರಾಯಣ ಪಿಳ್ಳೆ ಎಂಬವರ ಮನೆಗೆ ನುಗ್ಗಿದ ಇಬ್ಬರು ಆಗಂತುಕರು ಮನೆಯವರನ್ನು ಬೆದರಿಸಿ 35,000 ನಗದು ಹಾಗೂ 8 ಪವನ್ ಚಿನ್ನ, 2 ಮೊಬೈಲ್ ದೋಚಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ನಾರಾಯಣ ಪಿಳ್ಳೆ ಮತ್ತು ಅವರ ಪತ್ನಿ ಶ್ಯಾಮಲಾ ಮಾತ್ರ ಇದ್ದು ಬುಧವಾರ ರಾತ್ರಿ 07.30 ರ ಸುಮಾರಿಗೆ ಸುಮಾರಿಗೆ ಏಕಾಏಕಿ ನುಗ್ಗಿದ ತಂಡ ಚಾಕು, ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಇವರು ಮನೆಯಲ್ಲೇ ಇದ್ದು, ಮಲೆಯಾಳಂ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಉಪ್ಪಿನಂಗಡಿ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಉಡುಪಿ: ಶ್ರೀಕೃಷ್ಣನ ರಾಜಾಂಗಣದಲ್ಲಿ ಕಸ ತ್ಯಾಜ್ಯ        ➤ ಪ್ರವಾಸಿಗರಿಗೆ ದುರ್ವಾಸನೆಯ ದರ್ಶನ

error: Content is protected !!
Scroll to Top