ಬೆಳ್ಳಾರೆ: ಯುವಕ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ.21. ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ಎಂಬಲ್ಲಿ ಬುಧವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಯ್ಯನಕಟ್ಟೆ ನಿವಾಸಿ ಶಾಫಿ ಎಂದು ಗುರುತಿಸಲಾಗಿದೆ. ಉದ್ಯೋಗಕ್ಕೆಂದು ಬೆಂಗಳೂರಿಗೆ ತೆರಳಿದ್ದ ಈತ ಮಂಗಳವಾರದಂದು ಊರಿಗೆ ಬಂದಿದ್ದನೆನ್ನಲಾಗಿದ್ದು, ಬುಧವಾರ ಮಧ್ಯಾಹ್ನವಾದರೂ ಹೊರ ಬರದೆ ಇದ್ದುದರಿಂದ ಕಿಟಕಿಯ ಮೂಲಕ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಶಾಫಿ ಇತ್ತೀಚೆಗೆ ಯಮಹಾ ಎಫ್ ಝಡ್ ಬೈಕನ್ನು ಖರೀದಿಸಿದ್ದು, ಅದಕ್ಕಾಗಿ ಸಾಲ‌ ನೀಡಿದವರು ಕೇಳುತ್ತಿದ್ದರೆನ್ನಲಾಗಿದೆ. ಅದೇ ಕಾರಣಕ್ಕಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಡಬ: ವಾರಿಸುದಾರರಿಲ್ಲದ ದಲಿತ ಕುಟುಂಬದ ಭೂಮಿ ಅತಿಕ್ರಮಣ ಆರೋಪ - ದಲಿತ ಹಾಗೂ ಹಿಂದೂ ಪರ ಸಂಘಟನಾ ಸದಸ್ಯರ ಜಮಾವಣೆ - ಅಧಿಕಾರಿಗಳಿಗೆ ದೂರು

error: Content is protected !!
Scroll to Top