ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕತೆ ವಿನಾಶ: ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com . 05 ರಾಂಚಿ: ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದಲೂ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಲೇ ಬಂದಿದೆ. ಜೊತೆಗೆ, ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತದೆ ಎಂಬುದನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿದ್ದಾರೆ’ ಎಂದರು.

“ಕಾಂಗ್ರೆಸ್‌ನ ಕಾರ್ಯಸಾಧುವಲ್ಲದ ಚುನಾವಣಾ ಗ್ಯಾರಂಟಿಗಳು ಹೇಗೆ ರಾಜ್ಯಗಳನ್ನು ದಿವಾಳಿ ಮಾಡಬಲ್ಲದು ಎಂಬ ಸತ್ಯ ವನ್ನು ಖರ್ಗೆ ಹೇಗೆ ಬಹಿರಂಗವಾಗಿ ಹೇಳಿದರು ಎಂದು ನನಗೆ ಅಚ್ಚರಿಯಾಗುತ್ತಿದೆ. ಕಾಂಗ್ರೆಸ್‌ನ ಇಂಥ ಘೋಷಣೆಗಳಿಂದಾ ಗಿಯೇ ಇಂದು ಹಿಮಾಚಲ, ತೆಲಂಗಾಣ ಮತ್ತು ಕರ್ನಾಟಕದಂಥ ರಾಜ್ಯಗಳು ಆರ್ಥಿಕವಾಗಿ ವಿನಾಶವಾಗಿವೆ’ ಎಂದು ಮೋದಿ ಆರೋಪಿಸಿದರು.  ಇನ್ನು ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಟೀಕಿಸಿದ ಬಳಿಕ ಮೋದಿ ಅವರು, ‘ಸೌಲಭ್ಯ, ಸುರಕ್ಷೆ, ಸ್ಥಿರತೆ, ಸಮೃದ್ಧಿ ಇವು ಮೋದಿ ನೀಡುವ ಗ್ಯಾರಂಟಿಗಳು’ ಎಂದರು ಹಾಗೂ ಜಾರ್ಖಂಡ್‌ನಲ್ಲಿ ಬಿಜೆಪಿ ಗೆದ್ದರೆ ಮಹಿಳೆಯರಿಗೆ ಮಾಸಿಕ 2100 ರು. 500 ರು.ಗೆ ಸಿಲಿಂಡರ್, ವರ್ಷಕ್ಕೆ 2 ಉಚಿತ ಸಿಲಿಂಡರ್, ಯುವಕರಿಗೆ 2000 ರು. ನಿರುದ್ಯೋಗ ಭತ್ಯೆ ನೀಡುವ ಪ್ರಣಾಳಿಕೆಯ ಪುನರುಚ್ಚರಿಸಿದರು. ಅಂಶಗಳನ್ನು ರಾಜ್ಯಗಳ ದಿವಾಳಿ ಬಗ್ಗೆ ಖರ್ಗೆ ಸತ್ಯ ಹೇಳಿದ್ದಾರೆ ಕಾಂಗ್ರೆಸ್‌ನ ಕಾರ್ಯಸಾಧುವಲ್ಲದ ಚುನಾವಣಾ ಗ್ಯಾರಂಟಿ ಗಳು ಹೇಗೆ ರಾಜ್ಯಗಳನ್ನು ದಿವಾಳಿ ಮಾಡಬಲ್ಲದು ಎಂಬ ಸತ್ಯ ವನ್ನು ಸ್ವತಃ ಖರ್ಗೆ ಹೇಳಿದ್ದಾರೆ.

Also Read  ➤ 10th ಪಾಸಾದವರಿಗೆ CISFನಲ್ಲಿ ಉದ್ಯೋಗ ಅರ್ಜಿ ಸಲ್ಲಿಸಲು ಫೆ.22 ಕೊನೆ ದಿನ

error: Content is protected !!
Scroll to Top