ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ- ಡಾ| ಚೂಂತಾರು

(ನ್ಯೂಸ್ ಕಡಬ) newskadaba.com ಅ.29. ರಾಷ್ಟ್ರಪತಿ ಪದಕ ಪುರಸ್ಕಾರ ಪಡೆದ ದ.ಕ ಜಿಲ್ಲಾ ಸಮಾದೇಷ್ಠ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ಉಳ್ಳಾಲ ಘಟಕದ ವತಿಯಿಂದ  ಉಳ್ಳಾಲದಲ್ಲಿ ಸನ್ಮಾನ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಚೂಂತಾರು, ಪದಕ ಮತ್ತು ಸನ್ಮಾನ ಪಡೆದು ಜವಾಬ್ದಾರಿ ಹೆಚ್ಚಿದೆ. ಮತ್ತಷ್ಟು ಹುಮ್ಮಸ್ಸಿನಿಂದ ಸಾರ್ವಜನಿಕ ಸೇವೆ ಮಾಡಲು ಸ್ಪೂರ್ತಿ ದೊರಕಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಸುನಿಲ್ ಹಾಗೂ ಇತರ ಹಿರಿಯ ಗೃಹರಕ್ಷಕರು ಉಪಸ್ಥಿತರಿದ್ದರು.

Scroll to Top