ನಿಧಿಗಾಗಿ ತನ್ನ ಮಗಳನ್ನೇ ಬಲಿ ಕೊಡಲು ಮುಂದಾದ ಪಾಪಿ ತಂದೆ

(ನ್ಯೂಸ್ ಕಡಬ)newskadaba.com,. 29 ಬೆಂಗಳೂರು: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ತಂದೆಯೋರ್ವ ನಿಧಿಗಾಗಿ ತನ್ನ ಮಗುವನ್ನೇ ಬಲಿ ಕೊಡಲು ಮುಂದಾದ ಘಟನೆ ಜರುಗಿದೆ. ಬೆಂಗಳೂರಿನ ಕೆ ಆರ್ ಪುರಂನಲ್ಲಿ ಈ ಘಟನೆ ನಡೆದಿದೆ. ನಿಧಿಗಾಗಿ ಮಂತ್ರವಾದಿ ವಿದ್ಯೆ ಅಭ್ಯಾಸ ಮಾಡಿ, ತನ್ನ ಮಗುವನ್ನೇ ಬಲಿಕೊಡಲು ಮುಂದಾಗಿದ್ದಾನೆ.

ಸದ್ದಾಂ ಎಂಬುವ ಮಂತ್ರವಾದಿ ನಿಧಿಗಾಗಿ ಮಾಟ ಮಂತ್ರ ಮಾಡುತ್ತಿದ್ದನು. ನಿಧಿ ಆಸೆಗಾಗಿ ಕುಟ್ಟಿ ಸೈತಾನ್ ಪೂಜೆಯಲ್ಲಿ ತನ್ನ ಮಗುವನ್ನು ಬಲಿ ಕೊಡಲು ಮುಂದಾಗಿದ್ದು, ಬಲಿ ನೀಡುವಂತೆ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ. ಮಂತ್ರ ಪಠಿಸುತ್ತಾ ಸದ್ದಾಂ ತಡರಾತ್ರಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದನು. ಮಗುವನ್ನು ಬಲಿ ಕೊಡುವಂತೆ  ಸದ್ದಾಂ ತನ್ನ ಪತ್ನಿಗೆ ಕಿರುಕುಳ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸೈಕೋಪಾಥ್ ಪತಿಯ ಕಿರುಕುಳಕ್ಕೆ ಬೇಸತ್ತು ಸಂತ್ರಸ್ತೆ ಪೊಲೀಸ್ ಕಮೀಷನರ್ ಬಿ. ದಯಾನಂದ್​ ಅವರಿಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

Also Read  ಮಗುವಿನ ಕತ್ತಿನಿಂದ ಚಿನ್ನದ ಸರ ಏಗರಿಸಿದ ಖದೀಮ..! ➤ದೂರು ದಾಖಲು

ಆರೋಪಿ ಸದ್ಧಾಂ ನಾಲ್ಕು ವರ್ಷಗಳ ಹಿಂದೆ ಹಿಂದೂ ಯುವತಿಯನ್ನು ಮದುವೆಯಾಗಿದ್ದನು. ಆಗ ತಾನು ಹಿಂದೂ ಯುವಕ ಎಂದು ನಂಬಿಸಿ ಮದುವೆಯಾಗಿದ್ದನು. ತನ್ನ ಹೆಸರನ್ನು ಆಧೀಶ್ವರ್ ಎಂದು ಹೇಳಿಕೊಂಡಿದ್ದನು. ಕೆಲವುದಿನಗಳ ನಂತರ ಅವರಿಗೆ ಗಂಡು ಮಗು ಜನಸಿತು. ಆ ನಂತರ ಕುಟ್ಟಿ ಸೈತಾನ್ ಪೂಜೆಗೆ ಒತ್ತಾಯ ಮಾಡಲು ಶುರು ಮಾಡಿದನು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗು ಬಲಿ ಕೊಡಬೇಕು ಎಂದು ಹೇಳಿದ್ದನು.

Also Read  ಕಡಬ: 'ಝೂಬಿ ಗೋಲ್ಡ್' ವಿಸ್ತೃತ ಚಿನ್ನಾಭರಣ ಮಳಿಗೆ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್, ಲಕ್ಕೀ ಕೂಪನ್ ಡ್ರಾ

error: Content is protected !!
Scroll to Top