ಕಾಂಗ್ರೆಸ್ ಸರಕಾರ ಮೈಸೂರು ರಾಜಮನೆತನಕ್ಕೆ ಕಿರುಕುಳ ನೀಡುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

(ನ್ಯೂಸ್ ಕಡಬ)newskadaba.com,. 29 ಮೈಸೂರು: ಕಾಂಗ್ರೆಸ್ ಸರಕಾರ ಮೈಸೂರು ರಾಜಮನೆತನದೊಂದಿಗೆ ಹಗೆತನ ಸಾಧಿಸುತ್ತಿದ್ದು ರಾಜ್ಯದ ಅಭಿವೃದ್ಧಿಗೆ ಅತ್ಯಂತ ಕೊಡುಗೆ ನೀಡಿದ  ರಾಜಮನೆತನಕ್ಕೆ ಕಿರುಕುಳ ನೀಡುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನ ಶ್ರೀ ಚಾಮುಂಡೇಶ್ವರಿ ತಾಯಿ ಒಡೆಯರ್ ಮನೆತನದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ದುಷ್ಕೃತ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ರಾಜಮನೆತನ ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿತ್ತು. ಕ್ಷೇತ್ರದ ಅಭಿವೃದ್ಧಿಗೆ ಒಡೆಯರ್ ಕುಟುಂಬ ಸಾಕಷ್ಟು ಕೆಲಸ ಮಾಡಿದೆ. ಅಂತಹ ಕುಟುಂಬಕ್ಕೆ ಧಕ್ಕಿದ್ದ ದೇವರ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡು ಇನ್ನಿಲ್ಲದ ಕಿರುಕುಳ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ವಿಟ್ಲ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ - ಮೂರನೇ ಆರೋಪಿ ಅರೆಸ್ಟ್

error: Content is protected !!
Scroll to Top