ಆರೋಗ್ಯ ವಿಮೆಯ GST ರದ್ದತಿಗೆ ಕೇಂದ್ರ ಸರ್ಕಾರ ಚಿಂತನೆ

(ನ್ಯೂಸ್ ಕಡಬ)newskadaba.com,.28,ನವದೆಹಲಿ: ಆರೋಗ್ಯ ವಿಮೆಯ ಮೇಲಿನ GST ರದ್ಧತಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ವಿಮಾ ಪ್ರೀಮಿಯಂ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆಮತ್ತು ಟರ್ಮ್ ವಿಮೆ ಪಾಲಿಸಿಗಳ ಮೇಲೆ ಜಿಎಸ್ ಟಿ ತೆಗೆದುಹಾಕಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ವಿಮೆ ಮೇಲಿನ ಜಿಎಸ್ ಟಿ ತೆಗೆದುಹಾಕಲು ಸಾರ್ವಜನಿಕರಿಂದ ವ್ಯಾಪಕ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಜಿಎಸ್‌ಟಿ ತೆಗೆದು ಹಾಕಲು ಮುಂದಾಗಿದೆ ಎನ್ನಲಾಗಿದೆ.

Also Read  ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ

ಇನ್ನು ಸಾಮಾನ್ಯ ಜನರು ತೆಗೆದುಕೊಳ್ಳುವ ರೂ.5 ಲಕ್ಷದೊಳಗಿನ ಆರೋಗ್ಯ ವಿಮಾ ಪಾಲಿಸಿಗಳ ಮೇಲೆ ಈ ವಿನಾಯಿತಿ ಲಭ್ಯವಿರುತ್ತದೆ. 5 ಲಕ್ಷಕ್ಕಿಂತ ಹೆಚ್ಚಿನ ಪಾಲಿಸಿಗಳಿಗೆ ಶೇ.18ರಷ್ಟು ಜಿಎಸ್‌ಟಿ ಮುಂದುವರಿಯುತ್ತದೆ.

error: Content is protected !!
Scroll to Top