ದೇಶದಲ್ಲೇ ನಿರ್ಮಾಣವಾಗಲಿರುವ ಸರಕು ಸಾಗಾಣೆ ವಿಮಾನ – ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಲೋಕಾರ್ಪಣೆ

ನ್ಯೂಸ್ ಕಡಬ) newskadaba.com ವಡೋದರ, ಅ.28. ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ-295 (C-295) ಅತ್ಯಾಧುನಿಕ ವಿಮಾನಗಳು ಮೇಕ್‌ ಇನ್‌ ಇಂಡಿಯಾ ಅಡಿ ದೇಶದಲ್ಲೇ ತಯಾರಾಗಲಿದೆ. ಇಂದು ಗುಜರಾತ್‌ನ ವಡೋದರಾದಲ್ಲಿ ಸಿ-295 ಅತ್ಯಾಧುನಿಕ ವಿಮಾನಗಳನ್ನು ತಯಾರಿಸಲಿರುವ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಜಂಟಿಯಾಗಿ ಲೋಕಾರ್ಪಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಮೋದಿ, ಟಾಟಾ-ಏರ್‌ಬಸ್ ಉತ್ಪಾದನಾ ಸೌಲಭ್ಯವು ಭಾರತ-ಸ್ಪೇನ್ ಸಂಬಂಧಗಳನ್ನು ಮತ್ತು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ವಿಷನ್ ಅನ್ನು ಬಲಪಡಿಸುತ್ತದೆ. ವಡೋದರಾ ಸೌಲಭ್ಯದಲ್ಲಿ ತಯಾರಾದ ವಿಮಾನಗಳನ್ನು ಭವಿಷ್ಯದಲ್ಲಿ ರಫ್ತು ಮಾಡಲಾಗುವುದು ಎಂದು ತಿಳಿಸಿದರು.

Also Read  ಮೆಟ್ರೋ ರೈಲು ದರ ಪರಿಷ್ಕರಣೆ ರಾಜ್ಯ ಸರ್ಕಾರದ ಕೈಯಲ್ಲಿಲ್ಲ: ಸಿಎಂ ಸಿದ್ದರಾಮಯ್ಯ

error: Content is protected !!
Scroll to Top