ಟ್ವೆಂಟಿ-20 ತ್ರಿಕೋನ ಸರಣಿ ಫೈನಲ್ ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತ ► ಯುಗಾದಿ ಹಬ್ಬದಂದೇ ಭಾರತಕ್ಕೆ ರೋಚಕ ಗೆಲುವು ತಂದಿತ್ತ ದಿನೇಶ್ ಕಾರ್ತಿಕ್

(ನ್ಯೂಸ್ ಕಡಬ) newskadaba.com ಕೊಲಂಬೊ, ಮಾ.18. ಟ್ವೆಂಟಿ -20 ತ್ರಿಕೋನ ಸರಣಿಯ ಫೈನಲ್ ಪಂದ್ಯಾಟದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ತಂಡವು 4 ವಿಕೆಟ್ ಗಳ ಅಂತರದಲ್ಲಿ ಜಯಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್ ಗಳಲ್ಲಿ 166 ರನ್ ಪೇರಿಸಿ ಗೆಲುವಿಗೆ 167 ರನ್ ಗಳ ಸವಾಲನ್ನು ನೀಡಿತ್ತು. ಭಾರತದ ಗೆಲುವಿಗೆ 12 ಎಸೆತಗಳಲ್ಲಿ 34 ರನ್ ಗಳಿಸಬೇಕಾಗಿತ್ತು. ಉತ್ತಮ ದಾಂಡಿಗರೆಲ್ಲ ಔಟ್ ಆಗಿ ಪಂದ್ಯವನ್ನು ವೀಕ್ಷಿಸುತ್ತಿರಬೇಕಾದರೆ ಸೋಲಿನ ದವಡೆಗೆ ಸಿಲುಕಿದ್ದ ಭಾರತ ತಂಡವನ್ನು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಬೌಂಡರಿ, ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ದಡ ಸೇರಿಸಿದರು. ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್ ಗಳ ಆವಶ್ಯಕತೆ ಇತ್ತು. ಆದರೆ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವುದರ ಮೂಲಕ ಭಾರತ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಜಯಗಳಿಸಿತು. ಇದರೊಂದಿಗೆ ಯುಗಾದಿ‌ ಹಬ್ಬದಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟರು.

error: Content is protected !!

Join the Group

Join WhatsApp Group