ಜೇನುತುಪ್ಪ ಆರೋಗ್ಯಕರ ಉಪಕಾರಿ..!

(ನ್ಯೂಸ್ ಕಡಬ) newskadaba.com .23,  ಬೆಂಗಳೂರು.  ಜೇನುತುಪ್ಪ ಎಂದಾಗ ಎಲ್ಲರ ಬಾಯಲ್ಲೂ ನೀರುಬರುತ್ತದೆ. ಯಾಕೆಂದರೆ ಅದು ಅಷ್ಟೊಂದು ಸಿಹಿಯಾಗಿರುತ್ತದೆ. ಆದರೆ ಇದು ಬಾಯಿಗೆ ಸಿಹಿ ಮಾತ್ರವಲ್ಲ ಇದು ಆರೋಗ್ಯಕ್ಕೂ ಬಹಳ ಸಿಹಿಯಾದ ಪ್ರಯೋಜನಗಳನ್ನು ನೀಡುತ್ತದೆ. ಜೇನುತುಪ್ಪ ನೈಸರ್ಗಿಕವಾಗಿ ಸಿಗುವಂತಹ ಸಿಹಿಕಾರಕವಾಗಿದೆ. ಇದರಲ್ಲಿರುವ ಅದ್ಭುತ ಗುಣಗಳಿಂದಾಗಿ ಇದನ್ನು ಆಯುರ್ವೇದ,ಮನೆಮದ್ದುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಊಟದಲ್ಲಿ ಸೇರಿಸುವುದರಿಂದ ಸಿಹಿಯ ಕಡುಬಯಕೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಆದರೆ ಹೆಚ್ಚಿನ ಕ್ಯಾಲೊರಿ ಅಂಶದಿಂದಾಗಿ ಮಿತವಾಗಿ ಬಳಸಬೇಕು. ನೈಸರ್ಗಿಕ ಸಿಹಿಕಾರಕವಾದ  ಜೇನುತುಪ್ಪ ಸೇವಿಸೋದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಚಮಚ ಜೇನುತುಪ್ಪದಲ್ಲಿ 64 ಕ್ಯಾಲೊರಿಗಳು, 0 ಗ್ರಾಂ ಕೊಬ್ಬು, 0 ಮಿಗ್ರಾಂ ಸೋಡಿಯಂ, 17 ಗ್ರಾಂ ಕಾರ್ಬ್ಸ್, 17 ಗ್ರಾಂ ಸಕ್ಕರೆ ಮತ್ತು 0.1 ಗ್ರಾಂ ಪ್ರೋಟೀನ್ ಇರುತ್ತದೆ.
ಹೆಚ್ಚುವರಿಯಾಗಿ, ಇದರಲ್ಲಿ ಆರೋಗ್ಯವನ್ನು ಬೆಂಬಲಿಸುವ ಫ್ಲೇವನಾಯ್ಡ್ಗಳು ಮತ್ತು ಇತರ ಆ್ಯಂಟಿಆಕ್ಸಿಡೆಂಟ್ಗಳು ಹೇರಳವಾಗಿದೆ. ಜೇನುತುಪ್ಪವು ಸಾಮಾನ್ಯ ಸಕ್ಕರೆಗಿಂತ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದಿಲ್ಲ. ಇದು ಹಸಿವು ಮತ್ತು ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Also Read  ಈ ರಾಶಿ ನಕ್ಷತ್ರದವರನ್ನು ಈ ರಾಶಿ ನಕ್ಷತ್ರದವರು ಮದುವೆಯಾದರೆ ವೈವಾಹಿಕ ಜೀವನವು ಹಾಳಾಗಬಹುದು

ಜೇನುತುಪ್ಪ, ಫ್ರಕ್ಟೋಸ್ ಮತ್ತು ಗ್ಲುಕೋಸ್ ನೈಸರ್ಗಿಕ ಸಕ್ಕರೆಗಳಿಂದ ತಯಾರಾಗಿರುತ್ತದೆ. ಹಾಗಾಗಿ ಜೇನುತುಪ್ಪ ಸೇವಿಸಿದಾಗ ನಮ್ಮ ದೇಹದ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನೀವು ದಿನವಿಡೀ ಸಕ್ರಿಯವಾಗಿ ಕೆಲಸ ಮಾಡಬಹುದು. ಅಲ್ಲದೇ ಮಲಗುವ ಮೊದಲು ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡರೆ ನಿದ್ರೆಯ ವೇಳೆ ದೇಹದ ಹೆಚ್ಚಿನ ಕೊಬ್ಬನ್ನು ಸುಡಬಹುದು.

ಗ್ಲುಕೋಸ್ ಅನ್ನು ಉತ್ಪತ್ತಿಮಾಡಲು ಲಿವರ್  ಅನ್ನು ಉತ್ತೇಜಿಸುತ್ತದೆ. ಜೇನುತುಪ್ಪವು ಹೆಚ್ಚಿನ ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ ಮತ್ತು ಕೊಬ್ಬನ್ನು ಸುಡುವ ಹಾರ್ಮೋನುಗಳನ್ನು ಉತ್ಪಾದಿಸಲು ಮೆದುಳನ್ನು ಉತ್ತೇಜಿಸುತ್ತದೆ. ಜೇನುತುಪ್ಪ ಸಿಹಿ ತಿನ್ನಬೇಕೆಂಬ ಕಡುಬಯಕೆಗಳನ್ನು ಪ್ರಚೋದಿಸುವ ಮೆದುಳಿನ ಸಂಕೇತಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಸಿಹಿ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಮತ್ತು ಇದು ತೂಕವನ್ನು ನಿಯಂತ್ರಿಸುತ್ತದೆ.

Also Read  ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ...?

error: Content is protected !!
Scroll to Top