ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು- ಇಂದೇ ಅರ್ಜಿ ಸಲ್ಲಿಸಿ

(ನ್ಯೂಸ್ ಕಡಬ) newskadaba.com ಅ. 22. ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಜಿಲ್ಲಾ ಮಟ್ಟದ ಯೋಜನಾ ನಿರ್ವಹಣಾ ತಂಡದ ಸೇವೆಯನ್ನು ಪಡೆಯಲು ಗುತ್ತಿಗೆ ಆಧಾರದಲ್ಲಿ ಸಲಹೆಗಾರರು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ.

ಹುದ್ದೆಯ ವಿವರ:
ಜಿಲ್ಲಾ ಸಲಹೆಗಾರರು 01 ಹುದ್ದೆ
ವಿದ್ಯಾರ್ಹತೆ: ಬಿಎಸ್‌ಸಿ(ಕೃಷಿ) ಪದವಿ ಹಾಗೂ ಸ್ನಾತಕೋತ್ತರ ಪದವಿ,

ತಾಂತ್ರಿಕ ಸಹಾಯಕರು 02 ಹುದ್ದೆ ವಿದ್ಯಾರ್ಹತೆ ಬಿಎಸ್​ಸಿ(ಕೃಷಿ) ಪದವಿ, ಉತ್ತಮ ಕಂಪ್ಯೂಟರ್ ಪರಿಣತಿ, ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಅನುಭವ ಉಳ್ಳವರಿಗೆ ಪ್ರಾಶಸ್ತ್ಯ ಕೊಡಲಾಗುವುದು.

ವಯೋಮಿತಿ: ಈ ಹುದ್ದೆಗೆ ಕನಿಷ್ಟ ವಯೋಮಿತಿ 18 ವರ್ಷಗಳು, ಗರಿಷ್ಟ ಸಾಮಾನ್ಯ 35, ಪ.ಜಾತಿ, ಪ.ಪಂ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

Also Read  ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ದಾಖಲು! ➤ ಕರಾವಳಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

ವಿಶೇಷ ಸೂಚನೆ: ಈ ಹುದ್ದೆಗೆ ಅಭ್ಯರ್ಥಿಗಳು ಸರ್ಕಾರಿ ಇಲಾಖೆ/ಸಂಸ್ಥೆಗಳಿಂದ ನಿವೃತ್ತಿಯಾಗಿದ್ದಲ್ಲಿ (ಪಿಂಚಣಿ ಪಡೆಯುತ್ತಿದ್ದಲ್ಲಿ) ಈ ನೇಮಕಾತಿಗೆ ಅರ್ಹರಿರುವುದಿಲ್ಲ.

ಈ ಹುದ್ದೆಯನ್ನು ಆರು ತಿಂಗಳ ಅವಧಿಗೆ ಅಂದರೆ 31-03-2025 ರವರೆಗೆ ಅಥವಾ ಕೃಷಿ ಆಯುಕ್ತಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿದೆ.

ಈ ಹುದ್ದೆಗೆ ಅಭ್ಯರ್ಥಿಗಳು ಕೃಷಿ ಇಲಾಖೆಯಲ್ಲಿ ನಿಗದಿತ ಅರ್ಜಿ ಪಡೆದು ಭರ್ತಿ ಮಾಡಿ, ಅದರೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರ ಕಚೇರಿ ಓ. ಟಿ. ರಸ್ತೆ ಶಿವಮೊಗ್ಗ ಇಲ್ಲಿಗೆ ಅಂಚೆ ಮೂಲಕ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನ. 05 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲೆಯ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದಾಗಿದೆ.

error: Content is protected !!
Scroll to Top