ಎಂಎಲ್.ಸಿ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ..!

(ನ್ಯೂಸ್ ಕಡಬ) newskadaba.com. 21. ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ.

ಇಂದು ನಾಲ್ಕು ಗಂಟೆಗೆ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಲಿರುವ ಯೋಗೇಶ್ವರ್ ತಮ್ಮ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ. ಅದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಅಖಾಡ ಇನ್ನಷ್ಟು ಜೋರಾಗಿದೆ. ಅದರೊಂದಿಗೆ ಚನ್ನಪಟ್ಟಣದಲ್ಲಿ ಸಿಪಿವೈ ಸ್ವತಂತ್ರ ಸ್ಪರ್ಧೆ ಮಾಡೋದು ಖಚಿತವಾದಂತಾಗಿದೆ. ಕ್ಷೇತ್ರದಿಂದ ಟಿಕೆಟ್‌ ಸಿಗದ ಕಾರಣಕ್ಕಾಗಿ ಸಿಪಿವೈ ರೊಚ್ಚಿಗೆದ್ದಿದ್ದು ತಮ್ಮ ಎಂಎಲ್‌ಸಿ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡಲು ಸಭಾಪತಿ ಹೊರಟ್ಟಿ ಅವರ ಭೇಟಿಗೆ ತೆರಳಿದ್ದಾರೆ.

Also Read  ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ➤ ಪ್ರತಿಭೆ ಯಾವುದೇ ಧರ್ಮ ಜಾತಿಯ ಸೊತ್ತಲ್ಲ- ಡಾ. ಪ್ರಭಾಕರ್

error: Content is protected !!
Scroll to Top