ಮೊಸರು ವಡೆ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅ.18.

ಬೇಕಾಗುವ ಸಾಮಾಗ್ರಿಗಳು
ಅರ್ಧ ಕಪ್ ಉದ್ದಿನ ಬೇಳೆ
ಅರ್ಧ ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ರುಚಿಗೆ ತಕ್ಕಷ್ಟು
ಸ್ವಲ್ಪ ಎಣ್ಣೆ ವಡೆ ಮಾಡಲು
ಒಗ್ಗರಣೆಗೆ
ಅರ್ಧ ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಉದ್ದಿನಬೇಳೆ
ಕಾಲು ಟೀ ಸ್ಪೂನ್ ಶುಂಠಿ ಸಣ್ಣಗೆ ಹೆಚ್ಚಿದ್ದು
2ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು
4? 5 ಕರಿಬೇವಿನ ಎಲೆ
2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಟೀ ಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:
ಉದ್ದಿನ ಬೇಳೆಯನ್ನು ತೊಳೆದು ನೀರಿನಲ್ಲಿ 4 ? 5 ಗಂಟೆಗಳ ಕಾಲ ನೆನೆಯಲು ಬಿಡಿ. ನೆನೆಸಿದ ನಂತ್ರ ಉದ್ದಿನ ಬೇಳೆಗೆ ಅರ್ಧ ಕಪ್ ನೀರು ಸೇರಿಸಿ ರುಬ್ಬಿಕೊಳ್ಳಿ. ಅರೆದ ಹಿಟ್ಟಿಗೆ ಉಪ್ಪು, ಹೆಚ್ಚಿದ ಶುಂಠಿ ಮತ್ತು ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ. ಚೆನ್ನಾಗಿ ಕಲಸಿ. ಹಿಟ್ಟು ದಪ್ಪವಾಗಿ ಇಡ್ಲಿ ಹಿಟ್ಟಿನಷ್ಟು ಗಟ್ಟಿ ಇರಬೇಕು. ಗುಳಿಯಪ್ಪದ ಕಲ್ಲನ್ನು ಬಿಸಿಮಾಡಿಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ೫ ? 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು ವಡೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಬೇಯಿಸಿ. ಬೇಯಿಸಿದ ವಡೆಗಳನ್ನು ಬಿಸಿ ನೀರಿರುವ ಪಾತ್ರೆಗೆ ಹಾಕಿ. ಹತ್ತು ನಿಮಿಷದ ನಂತ್ರ ಹಗುರವಾಗಿ ಒತ್ತಿ, ತೆಗೆದಿಡಿ. ಇನ್ನೊಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಂಡು ಸಕ್ಕರೆ ಮತ್ತು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. ಅದಕ್ಕೆ ನೀರಿನಲ್ಲಿ ನೆನೆಸಿ ತೆಗೆದಿಟ್ಟ ವಡೆ ಹಾಕಿ. ಮೇಲಿನಿಂದ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಒಗ್ಗರಣೆ ಹಾಕಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. ಹತ್ತು ನಿಮಿಷ ಬಿಟ್ಟು ಸವಿದು ಆನಂದಿಸಿ

Also Read  ಇಲ್ಲಿದೆ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ರೆಸಿಪಿ

 

error: Content is protected !!
Scroll to Top