GST ವಂಚನೆ ಮಾಸ್ಟರ್ ಮೈಂಡ್ ಗಳನ್ನು ಬಂಧಿಸಲು ಹೊಸ ತಂತ್ರ: ತೆರಿಗೆ ಇಲಾಖೆ ಆಯುಕ್ತೆ ಶಿಖಾ

(ನ್ಯೂಸ್ ಕಡಬ) newskadaba.com . 16. ಬೆಂಗಳೂರು: 2017 ರಲ್ಲಿ ಜಿಎಸ್‌ಟಿ ಪರಿಚಯಿಸಿದಾಗಿನಿಂದ, ಅತ್ಯಾಧುನಿಕ ಹಗರಣ ಆರಂಭವಾಗಿದೆ. ಜಿಎಸ್ ಟಿಯಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಪ್ರತಿ ವರ್ಷ ಬೊಕ್ಕಸದಿಂದ ಸಾವಿರಾರು ಕೋಟಿ ಹಣ ವಂಚನೆಯಾಗುತ್ತಿದೆ. ನೂರಾರು ವಂಚಕರನ್ನು ಬಂಧಿಸಲಾಗಿದೆ ಆದರೆ ಮಾಸ್ಟರ್‌ಮೈಂಡ್‌ಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ವರ್ಷ, ನಾವು ಕರ್ನಾಟಕದಲ್ಲಿಯೇ 1,000 ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಮುಚ್ಚುತ್ತೇವೆ, ಆದರೆ ಅಂತ ಕಂಪನಿಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ನಾವು ಅವರನ್ನು ಆರು ತಿಂಗಳೊಳಗೆ ಹಿಡಿಯದಿದ್ದರೆ, ಅವು ಕಣ್ಮರೆಯಾಗುತ್ತವೆ ಎಂದಿದ್ದಾರೆ.ಜಿಎಸ್ ಟಿ ವಂಚಕರನ್ನು ಹಿಡಿಯಲು ಅಪರಿಮಿತವಾಗಿ ಇಲಾಖೆ ಶ್ರಮಿಸುತ್ತಿದೆ ಎಂದು ವಾಣಿಜ್ಯ ತೆರಿಗೆ ಆಯುಕ್ತೆ ಸಿ ಶಿಖಾ ತಿಳಿಸಿದ್ದಾರೆ. ನಮ್ಮಲ್ಲಿ ಮಾನವ ಶಕ್ತಿಯ ಕೊರತೆಯಿದೆ. ಅದರಲ್ಲೆ ನಾವು ವಂಚನೆಗಳ ವಿರುದ್ಧ ಯುದ್ಧ ಸಾರಿದ್ದೇವೆ. ಏಕೆಂದರೆ ಮೋಸದ ಕಂಪನಿಗಳನ್ನು ಮುಚ್ಚುವುದು ಮೊದಲ ಹೆಜ್ಜೆಯಾಗಿದೆ. ನಿಜವಾದ ಮಾಸ್ಟರ್‌ಮೈಂಡ್‌ಗಳನ್ನು ಹಿಡಿಯಲು ತಿಂಗಳ ಟ್ರ್ಯಾಕಿಂಗ್ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಈ ಕಂಪನಿಗಳನ್ನು ಹಿಡಿಯುವುದು ಕಾಲಾಳುಗಳನ್ನು ಬಂಧಿಸಿದಂತೆ ಆದರೆ ನಿಜವಾದ ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆಎಂದು ಅವರು ಹೇಳಿದರು.

Also Read  ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದ 'ಭಗ್ನಪ್ರೇಮಿ'...!!                            

error: Content is protected !!
Scroll to Top