ಕಳೆದು ಹೋಗಿರೋ Voter ID ಮನೆಯಲ್ಲೇ ಕುಳಿತು ಹೀಗೆ ಡೌನ್ಲೋಡ್ ಮಾಡಿ…

(ನ್ಯೂಸ್ ಕಡಬ) newskadaba.com . 14 . ಭಾರತ ದೇಶದಲ್ಲಿ ಸುಮಾರು 18 ವರ್ಷ ಪೂರ್ತಿಯಾದ ಭಾರತದ ಪ್ರತೀ ವಯಸ್ಕರಿಗೆ ಭಾರತದ ಚುನಾವಣಾ ಆಯೋಗವು ನೀಡಿದ ದಾಖಲೆಯಾಗಿದೆ ಭಾರತೀಯ ಮತದಾರರ ಗುರುತಿನ ಚೀಟಿ. ಅಂದಹಾಗೆ ಮತದಾರರ ಗುರುತಿನ ಚೀಟಿಯು ಪುರಸಭೆ, ರಾಜ್ಯಸಭೆ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಮತದಾನ ಮಾಡುವಾಗ ಭಾರತೀಯ ನಾಗರಿಕರಿಗೆ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಈಗಿನ ಕಾಲದಲ್ಲಿ ಎಲ್ಲರೂ ದಾಖಲೆಗಲನ್ನು ಮೊಬೈಲ್ ಗಳಲ್ಲಿ ಸೇವ್ ಮಾಡಟ್ಟುಕೊಳ್ಳುವುದು ರೂಢಿಯಾಗಿದೆ. ಅಲ್ಲದೇ ನಿಮ್ಮ ಫೋನ್‌ನಲ್ಲಿ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಡುವುದು ಕೂಡಾ ಬಹಳ ಮುಖ್ಯವಾಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಭಾರತದ ಚುನಾವಣಾ ಆಯೋಗವು ಕಳೆದ ವರ್ಷ e-EPIC ಕಾರ್ಡ್ ಕಾರ್ಯಕ್ರಮವನ್ನು ಪರಿಚಯಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮತದಾರರು ಮತದಾನದ ಸಮಯದಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ಸೇವೆಯನ್ನು ಪಡೆಯಲು ಶಿಫಾರಸು ಮಾಡಲಾಗಿದೆ. e-EPIC ನಿಮ್ಮ ಭೌತಿಕ ಮತದಾರರ ID ಕಾರ್ಡ್‌ನ (ಪೋರ್ಟಬಲ್ ಡಾಕ್ಯುಮೆಂಟ್ ಫೋರ್ಮೇಟ್) PDF ಆವೃತ್ತಿಯಾಗಿದೆ.

ಇದನ್ನು ಮೊಬೈಲ್ ನಲ್ಲಿ ಒಂದೇ ಕ್ಲಿಕ್‌ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮತದಾರರು ಇ-ಇಪಿಐಸಿಯನ್ನು ತಮ್ಮ ಫೋನ್‌ನಲ್ಲಿ ಉಳಿಸಬಹುದು ಅಥವಾ ಡಿಜಿ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಮತದಾನದ ಹೊರತಾಗಿ ವೋಟರ್ ಐಡಿಯನ್ನು ವಿಳಾಸ ಪುರಾವೆಯಾಗಿ ಅಥವಾ ಯಾವುದೇ ಇತರ ಪರಿಶೀಲನೆ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ.

Also Read  ಜೀವರಕ್ಷಕತ್ವ ಕಳೆದುಕೊಳ್ಳುತ್ತಿರುವ ಆಂಟಿಬಯೋಟಿಕ್‍ಗಳು

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಈ ರೀತಿ ಡೌನ್ಲೋಡ್ ಮಾಡಬಹುದು

1.ಮೊದಲು https://voterportal.eci.gov.in ಹೋಗಿ ನಂತರ ಕೆಳಗೆ E-EPIC Downlod ಎಂಬ ಆಯ್ಕೆಯನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿ.

2.ಈಗ ಇದರಲ್ಲಿ ನೀವು ಈ ವೋಟರ್ ಕಾರ್ಡ್ ಮಾಡಿಸುವಾಗ ನೀಡಿದ್ದ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಅಥವಾ ವೋಟರ್ ಕಾರ್ಡ್ ನಂಬರ್ ನಮೂದಿಸಬೇಕು.

3.ಇದರ ನಂತರ ಕೆಳಗೆ ಅದಕ್ಕೆ ಪಾಸ್ವರ್ಡ್ ನೀಡಬೇಕಾಗುತ್ತದೆ. ಒಂದು ವೇಳೆ ಪಾಸ್ವರ್ಡ್ ಮರೆತಿದ್ದರೆ ನೀವು Forgot Password ಮೇಲೆ ಕ್ಲಿಕ್ ಮಾಡಿ ರಿಸೆಟ್ ಮಾಡುವ ಲಿಂಕ್ ಪಡೆಯಬಹುದು

4.ಇದರ ನಂತರ ನೀವು ಕೆಳಗೆ ನೀಡಿರುವ ಕ್ಯಾಪ್ಚಾ ಕೋಡ್ ನೀಡಬೇಕಾಗುತ್ತದೆ ಇದರ ನಂತರ Request OTP ಮೇಲೆ ಕ್ಲಿಕ್ ಮಾಡಿ ಈಗ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. ಅದನ್ನು ಇಲ್ಲಿ ನಮೂದಿಸಿ ನಿಮ್ಮ ವೋಟರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

Also Read  ಚಿಕನ್ ವ್ಯಾಪಾರದ ಪಿಕಪ್ ವಾಹನ ಕದ್ದ ಕಳ್ಳರ ಬಂಧನ

ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸುವುದು ಹೇಗೆ?

ಅರ್ಜಿದಾರರು ತಮ್ಮ ವೋಟರ್ ಐಡಿ ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಐಡಿ ನಕಲಿ ಎಂದು ಅನುಮಾನಿಸಿದರೆ ತಮ್ಮ ವೋಟರ್ ಐಡಿಯನ್ನು ಪರಿಶೀಲಿಸಬಹುದು. ಅರ್ಜಿದಾರರು ತಮ್ಮ ರಾಜ್ಯದ ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ವೆಬ್‌ಸೈಟ್ ಅಥವಾ ಹತ್ತಿರದ ರಾಜ್ಯ ಚುನಾವಣಾ ಕಚೇರಿಗೆ ಭೇಟಿ ನೀಡಬೇಕು. ಹಾಗೆ ಮಾಡುವಾಗ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಹುಡುಕಬೇಕು ಮತ್ತು ಪರಿಶೀಲಿಸಬೇಕು. ನಂತರ ಅವರು ವಿವರಗಳನ್ನು ಪರಿಶೀಲಿಸಬಹುದು. ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅರ್ಜಿದಾರರು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ದೇಶದ ಪ್ರತಿಯೊಬ್ಬ ಮತದಾರರು EPIC ಸಂಖ್ಯೆಯನ್ನು ಹೊಂದಿದ್ದಾರೆ ಮತ್ತು ಅವರು ಮೇಲೆ ತಿಳಿಸಿದ ಹಂತಗಳ ಮೂಲಕ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇ-EPIC ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

error: Content is protected !!
Scroll to Top